ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಜಂಪ್‌ರೋಪ್‌ ಚಾಂಪಿಯನ್‌ಶಿಪ್‌ಗೆ ತೆರೆ: ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ

Last Updated 31 ಜುಲೈ 2022, 14:46 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಭಾನುವಾರ ಇಲ್ಲಿ ಕೊನೆಗೊಂಡ 19ನೇ ರಾಷ್ಟ್ರೀಯ ಜಂಪ್‍ರೋಪ್‌ ‘ಡಬಲ್ ಡಚ್’ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವು ಸಮಗ್ರ ಪ್ರಶಸ್ತಿ ಜಯಿಸಿದೆ.

ಕರ್ನಾಟಕ ಒಟ್ಟು 66 ಪದಕಗಳನ್ನು ಜಯಿಸಿದರೆ, ಮಹಾರಾಷ್ಟ್ರ 55 ಹಾಗೂ ಹರಿಯಾಣ 43 ಪದಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಇನ್ನು, ಡೆಮೊ ಕಪ್‌ನಲ್ಲಿ ಮಧ್ಯಪ್ರದೇಶ ಪ್ರಥಮ, ಹರಿಯಾಣ ಹಾಗೂ ಅಸ್ಸಾಂ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿವೆ. ವಿಜೇತ ತಂಡಗಳಿಗೆ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿಕಾಸ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಪ್ರಶಸ್ತಿ ಪ್ರದಾನ ಮಾಡಿದರು.

ಮೂರು ದಿನಗಳ ಜಂಪ್‌ರೋಪ್‌ ಸ್ಪರ್ಧೆಯಲ್ಲಿ 18 ರಾಜ್ಯಗಳ 150 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಜಂಪ್‍ರೋಪ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಜಂಪ್‍ರೋಪ್ ಅಸೋಸಿಯೇಷನ್‌, ವಿಕಾಸ ಬ್ಯಾಂಕ್ ಸಹಭಾಗಿತ್ವದಲ್ಲಿ ಚಾಂಪಿಯನ್‌ಶಿಪ್‌ ಹಮ್ಮಿಕೊಳ್ಳಲಾಗಿತ್ತು. ಜಂಪ್‌ ರೋಪ್‌ ಫೆಡರೇಶನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‍ ರಜಾಕ್‌, ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ, ಫೆಡರೇಶನ್‌ ಸಹ ಕಾರ್ಯದರ್ಶಿ ಸಾಜೀದ್‍ಖಾನ್, ನಿರ್ದೇಶಕ ಅನಂತ ಜೋಶಿ, ಹಿರಿಯ ನಿರ್ದೇಶಕ ಅಶೋಕ ದುಗಾರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT