ಶನಿವಾರ, ಜುಲೈ 31, 2021
21 °C

ಹೊಸಪೇಟೆ: ಪೆಟ್ರೋಲ್‌ 97 ಪೈಸೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಸತತವಾಗಿ ಹೆಚ್ಚಳವಾಗುತ್ತಲೇ ಇದೆ. ಈ ವಾರವೂ ಪೆಟ್ರೋಲ್‌ ದರದಲ್ಲಿ ಹೆಚ್ಚಿನ ಏರಿಕೆಯಾದರೆ, ಡೀಸೆಲ್‌ ಬೆಲೆ ಕೆಲ ಪೈಸೆ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಹೋದ ವಾರ (ಜು.11) ಪ್ರತಿ ಲೀಟರ್‌ ಪೆಟ್ರೋಲ್‌ ಸರಾಸರಿ ಬೆಲೆ ₹105.55 ಇತ್ತು. ಈ ವಾರ ₹106.52ಕ್ಕೆ ಏರಿಕೆಯಾಗಿದ್ದು, ಒಟ್ಟು 97 ಪೈಸೆ ಹೆಚ್ಚಳವಾಗಿದೆ. ಅದೇ ರೀತಿ ಹಿಂದಿನ ವಾರ ಡೀಸೆಲ್‌ ದರ ₹96.40 ಇತ್ತು. ಈ ವಾರ ₹96.44 ಆಗಿದ್ದು, 4 ಪೈಸೆ ಏರಿಕೆ ಕಂಡಿದೆ.

ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ–
ಪೆಟ್ರೋಲ್‌ ಪೆಟ್ರೋಲ್‌ ಡೀಸೆಲ್‌ ಡೀಸೆಲ್‌ (₹ ಪ್ರತಿ ಲೀಟರ್‌ಗೆ)
ಜು.11 ಜು.18 ಜು.11 ಜು.18
ಎಚ್.ಪಿ. 105.52 106.50 96.15 96.42
ಐ.ಒ.ಸಿ. 105.51 106.47 96.40 96.40
ಬಿ.ಪಿ. 105.55 106.52 96.22 96.44

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು