ವೇದಿಕೆ ಅಧ್ಯಕ್ಷರೂ ಆಗಿರುವ ನಗರಸಭೆ ಮಾಜಿ ಸದಸ್ಯ ವೈ.ಗೋಂವಿಂದರಾಜು ಮಾತನಾಡಿ, 'ಹುಡಾ’ದಿಂದ 2014ರಲ್ಲಿ ನಗರದ ವಿವಿಧ ಭಾಗಗಳಲ್ಲಿ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಅದರಲ್ಲಿ 20x30, 30x40 ಅಳತೆಯ ನಿವೇಶನಗಳನ್ನು ನೀಡುವುದಾಗಿ ಸಾರ್ವಜನಿಕರಿಂದ ಲಕ್ಷಾಂತರ ಹಣ ಪಾವತಿಸಿಕೊಂಡಿದೆ. ಆದರೆ, ಇದುವರೆಗೂ ನಿವೇಶನ ಹಂಚಿಕೆ ಮಾಡದೇ ವಂಚಿಸಲಾಗಿದೆ ಎಂದರು.