ಹೊಸಪೇಟೆ: ಜಿಲ್ಲೆಯ ಹೊಸಪೇಟೆ ನಗರ, ಹೂವಿನಹಡಗಲಿ, ಹರಪನಹಳ್ಳಿ ತಾಲ್ಲೂಕುಗಳಲ್ಲಿ ಶುಕ್ರವಾರ ಮಧ್ಯಾಹ್ನ ಮತ್ತು ಸಂಜೆ ಸಾಧಾರಣ ಮಳೆ ಸುರಿದಿದ್ದು, ಹೂವಿನಹಡಗಲಿ ತಾಲ್ಲೂಕು ಸೋಗಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆ ಸುರಿದ ಕಾರಣ ಒಂದೂವರೆ ಎಕರೆ ಬಾಳೆತೋಟ, ಬಾವಿಹಳ್ಳಿ ಗ್ರಾಮದಲ್ಲಿ ಎರಡು ಎಕರೆ ನುಗ್ಗೆ ತೋಟ ನೆಲಕ್ಕೆ ಉರುಳಿ ಅಪಾರ ಹಾನಿ ಸಂಭವಿಸಿದೆ.

ಹಾನಿಗೆ ಒಳಗಾದ ಬಾಳೆತೋಟ ಸೋಗಿಯ ರೈತ ಅರವಿಂದ ಅವರಿಗೆ ಸೇರಿದ್ದರೆ, ನುಗ್ಗೆ ತೋಟ ಬಾವಿಹಳ್ಳಿಯ ಸಿ.ಜೆ.ವೀರನಗೌಡ ಅವರಿಗೆ ಸೇರಿದೆ. ಸೋಗಿ ಗ್ರಾಮದ ಶಾಲೆ ಬಳಿ ಎರಡು ವಿದ್ಯುತ್ ಕಂಬಗಳು, ಗಿಡಮರಗಳು ಉರುಳಿ ಬಿದ್ದಿವೆ.

ಜಿಲ್ಲೆಯ ಹರಪನಹಳ್ಳಿ, ಅರಸೀಕೆರೆ ಭಾಗದಲ್ಲೂ ಸಾಧಾರಣ ಮಳೆಯಾಗಿದೆ. ಹೊಸಪೇಟೆ ನಗರದಲ್ಲಿ ವರ್ಷದ ಮೊದಲ ಮಳೆ ಹತ್ತು ನಿಮಿಷ ಸುರಿದ ಕಾರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಸ್ವಲ್ಪ ನೆಮ್ಮದಿಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.