ಹೊಸಪೇಟೆ: ತಂಪೆರೆದ ಜಿಟಿಜಿಟಿ ಮಳೆ

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.
ಬೆಳಿಗ್ಗೆಯಿಂದಲೇ ಕಾರ್ಮೋಡ ಕವಿದಿತ್ತು. ಮಧ್ಯಾಹ್ನ ಆರಂಭವಾದ ಜಿಟಿಜಿಟಿ ಮಳೆ ಆಗಾಗ ಬಿಡುವು ಕೊಡುತ್ತ ದಿನವಿಡೀ ಸುರಿಯಿತು. ಸತತ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ. ಸಂಪೂರ್ಣ ಲಾಕ್‌ಡೌನ್, ಸತತ ಮಳೆಯಿಂದ ಭಾನುವಾರ ಬಹುತೇಕ ರಸ್ತೆಗಳು ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು.
ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ, ಬುಕ್ಕಸಾಗರ, ಹೊಸೂರು, ನಾಗೇನಹಳ್ಳಿ, ಧರ್ಮದಗುಡ್ಡ, ಇಪ್ಪಿತ್ತೇರಿ ಮಾಗಾಣಿ, ಬಸವನದುರ್ಗ ಸೇರಿದಂತೆ ಹಲವೆಡೆ ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.