ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಒಂದು ಕಲ್ಲು ಎತ್ತಿ ಇಡುವುದಾದರೂ ಹದ್ದಿನ ಕಣ್ಣು ಇದ್ದೇ ಇರುತ್ತದೆ, ಆದರೆ ಐತಿಹಾಸಿಕ ಕಮಲಾಪುರ ಕೋಟೆಯ ಪಕ್ಕದಲ್ಲಿ ಸಾಗುವ ರಸ್ತೆ ಕಾಮಗಾರಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಬೇಕಾಬಿಟ್ಟಿಯಾಹಿ ನಡೆಯುತ್ತಿರುವ ಸಂಶಯ ಹುಟ್ಟಿಸಿದೆ.

ಕಮಲಾಪುರದಿಂದ ಹಂಪಿಯತ್ತ ಸಾಗುವಾಗ ಸಿಗುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಎಡಕ್ಕೆ ತಿರುಗುವ ರಸ್ತೆ ಇರುವುದು ಕೋಟೆಯ ಮೇಲ್ಭಾಗದಲ್ಲೇ. ಎರಡೂ ಬದಿ ಹಚ್ಚ ಹಸರಿನ ಬಾಳೆ ತೋಟಗಳ ನಡುವೆ ಸಾಗುವ ಈ ರಸ್ತೆ ಕೋಟೆಯೇ ಆಗಿದ್ದು, ಸುಮಾರು ನಾಲ್ಕು ಕಿ.ಮೀ. ದೂರಕ್ಕೆ ಸಾಗಿ ಅಕ್ಕತಂಗಿಯರ ಕಲ್ಲಿನ ಸಮೀಪ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ (ಎನ್ಜಿಎನ್ಆರ್ವೈ) ರಸ್ತೆ ಸೇರುತ್ತದೆ. ಕಲ್ಯಾಣ ಪಥ ಯೋಜನೆಯಡಿಯಲ್ಲಿ ಈ ಕೋಟೆ ರಸ್ತೆ ಅಭಿವೃದ್ಧಿಪಡಿಸುವ ಕೆಲಸ ಆರಂಭವಾಗಿದ್ದು, ಇತಿಹಾಸದ ಮೇಲೆ ಕಾಳಜಿ ಇರುವ ಹತ್ತಾರು ಮಂದಿ ಆತಂಕ ಪಡುವಂತೆ ಮಾಡಿದೆ.

‘ಇದೊಂದು ಐತಿಹಾಸಿಕ ಕೋಟೆ, ಇಲ್ಲಿ ರೈತರು ಓಡಾಡುತ್ತಾರೆ. ಅವರು ರಸ್ತೆ ಅಭಿವೃದ್ಧಿ ಮಾಡಿ ಎಂದು ಕೇಳಿಕೊಂಡೇ ಇಲ್ಲ. ಈ ರಸ್ತೆ ಅಭಿವೃದ್ಧಿಗೆ ಚಾಲನೆ ಸಿಕ್ಕಿದೊಡೆನೆಯೇ ಕೋಟೆಯ ಬೃಹತ್ ಕಲ್ಲುಗಳನ್ನು ಬೇಕಾಬಿಟ್ಟಿ ಜೆಸಿಬಿ ಮೂಲಕ ಬದಿಗೆ ತಳ್ಳುತ್ತಿರುವುದು ಕಾಣಿಸಿದೆ. ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಇಂತಹ ಕಾಮಗಾರಿ ಮಾಡಬೇಕಲ್ಲವೇ? ಇತಿಹಾಸದ ಭವ್ಯ ಕೊಂಡಿಗೆ ಧಕ್ಕೆ ಒದಗಿದರೆ ಯಾರು ಹೊಣೆ?’ ಎಂದು ಮಾನವೀಯ ಸಹಾಯ ಸಂಸ್ಥೆಯ ಸದಸ್ಯ ಕೆ.ಎನ್.ಲೋಕೇಶ್ ಪ್ರಶ್ನಿಸಿದರು.

ಶತ್ರುದಾಳಿ, ಪ್ರವಾಹ ತಡೆಯುವ ಕೋಟೆ: ‘ಈ ಕೋಟೆಯನ್ನು ವಿಜಯನಗರ ಕಾಲದಲ್ಲಿ ಶತ್ರುಗಳ ದಾಳಿಯನ್ನು ತಡೆಯಲು ಮತ್ತು ಪ್ರವಾಹ ಬಂದಾಗ ನಿಯಂತ್ರಿಸಲು ನಿರ್ಮಿಸಲಾಗಿತ್ತು. ರಸ್ತೆ ಅಭಿವೃದ್ಧಿ ನಪದಲ್ಲಿ ಕೋಟೆಯ ಮೇಲೆ ಡಾಂಬರೀಕರಣ ಮಾಡಿದರೆ ಅಧಿಕ ಭಾರದ ವಾಹನಗಳು ಸಂಚರಿಸಿ ಕೋಟೆಗೆ ಧಕ್ಕೆ ಒದಗುವುದು ನಿಶ್ಚಿತ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು’ ಎಂದು ಮಾನವೀಯ ಸಹಾಯ ಸಂಸ್ಥೆಯ ಅದ್ಯಕ್ಷ ಶ್ರೀನಿವಾಸ್ ಹೇಳಿದರು.

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ (ಹವಾಮ) ಪಡೆದ ನಿರಾಕ್ಷೇಪಣಾ ಪತ್ರದಲ್ಲಿ ವಿಧಿಸಿರುವ ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗುತ್ತಿದೆ ಎಂಬ ಸಂಶಯ ಬಲವಾಗಿದ್ದು, ಈ ಬಗ್ಗೆ ‘ಹವಾಮ’ ಮತ್ತು ರಾಜ್ಯ ಸರ್ಕಾರದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಈ ರೀತಿಯ ಆಧುನಿಕ ಕೆಲಸಗಳನ್ನು ನಿಲ್ಲಿಸಬೇಕು ಇತಿಹಾಸವನ್ನು ಉಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಕೆ .ಎನ್.ಲೋಕೇಶ್ ಸದಸ್ಯರು ಮಾನವೀಯ ಸಹಾಯ ಸಂಸ್ಥೆ

ಷರತ್ತಿಗೆ ಇಲ್ಲ ಕಿಮ್ಮತ್ತು?

ರಸ್ತೆ ಕಾಮಗಾರಿಗೆ ಮೊದಲು ‘ಹವಾಮ’ ನಿರಾಕ್ಷೇಪಣಾ ಪತ್ರ ಪಡೆಯಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಹಾಗೂ ರಾಜ್ಯ ಸರ್ಕಾರದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲೇ ಕಾಮಗಾರಿ ಕೈಗೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ ಅದನ್ನು ಪಾಲಿಸಲಾಗುತ್ತಿಲ್ಲ ಎಂಬುದು ಸ್ಥಳೀಯರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.