ಹೊಸಪೇಟೆ (ವಿಜಯನಗರ): ಇಲ್ಲಿಗೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ ಗರಿಷ್ಠ ಮಟ್ಟವಾದ 1,633 ಅಡಿಯಷ್ಟು ನೀರನ್ನು ಇದೀಗ ಸಂಗ್ರಹಿಸಿ ಆ ಮಟ್ಟವನ್ನು ಕಾಯ್ದುಕೊಳ್ಳಲಾಗಿದ್ದು, 9 ಕ್ರಸ್ಟ್‌ಗೇಟ್‌ಗಳ ಮೂಲಕ 28,133 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಜಲಾಶಯದ ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ ಆಗಿದ್ದು, ಸದ್ಯ ಅಷ್ಟೂ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.
ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿರುವ ಕಾರಣ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ತುಂಗಾ ಜಲಾಶಯದಿಂದ 8,420 ಕ್ಯುಸೆಕ್, ಭದ್ರಾ ಜಲಾಶಯದಿಂದ 2,400 ಸೇರಿದಂತೆ ಸರಾಸರಿ 40,925 ಕ್ಯುಸೆಕ್ ಒಳಹರಿವು ಇದೆ.
ಜುಲೈ 22ರಂದೇ ಅಣೆಕಟ್ಟೆ ಬಹುತೇಕ ತುಂಬುವ ಹಂತಕ್ಕೆ ಬಂದಿತ್ತು. ಅಣೆಕಟ್ಟೆಯ ಸುರಕ್ಷತೆ ಹಾಗೂ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚುವ ನಿರೀಕ್ಷೆ ಇದ್ದ ಕಾರಣ ಅದೇ ದಿನ ಮೊದಲಿಗೆ ಮೂರು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ಹೊರಗೆ ಬಿಡಲು ಆರಂಭಿಸಲಾಗಿತ್ತು. ಒಳಹರಿವು ಹೆಚ್ಚಾದಂತೆ ಗರಿಷ್ಠ ಮಟ್ಟವನ್ನು ತಲುಪಿಸುವ ಬದಲಿಗೆ ಒಂದಿಷ್ಟು ಅಂತರವನ್ನು ಉಳಿಸಿಕೊಂಡು ನದಿಗ ಅಧಿಕ ಪ್ರಮಾಣದಲ್ಲಿ ನೀರು ಹರಿಸುವ ಕೆಲಸವನ್ನು ತುಂಗಭದ್ರಾ ಮಂಡಳಿ ಮಾಡಿತ್ತು. ಆಗಸ್ಟ್ 2ರಂದು ಜಲಾಶಯದ ಒಳಹರಿವಿನ ಪ್ರಮಾಣ ಈ ವರ್ಷದ ಗರಿಷ್ಠವಾದ 1.97 ಲಕ್ಷ ಕ್ಯುಸೆಕ್‌ಗೆ ತಲುಪಿತ್ತು ಮತ್ತು ಹೊರಹರಿವಿನ ಪ್ರಮಾಣ 1,78 ಲಕ್ಷ ಕ್ಯುಸೆಕ್‌ನಷ್ಟಾಗಿತ್ತು. ಆ ಬಳಿಕ ಅದರ ಪ್ರಮಾಣ ಇಳಿಕೆಯಾಗುತ್ತ ಬಂದಿತ್ತು.ತುಂಗಭದ್ರಾ ಅಣೆಕಟ್ಟೆ