ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋಗಲು ನೀರಿನ ಒತ್ತಡವೇ ಕಾರಣ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ.ಕೆ.ಬಜಾಜ್ ನೇತೃತ್ವದ ತಜ್ಞರ ತಂಡ ತಿಳಿಸಿದೆ. ಇದರ ಬಗ್ಗೆ ವರದಿ ಸಲ್ಲಿಸಿರುವ ತಂಡವು, ‘ಎಲ್ಲ 33 ಗೇಟ್‌ಗಳನ್ನೂ ಬದಲಿಸಿ, ಹೊಸ ಗೇಟ್ ಅಳವಡಿಸಿ’ ಎಂದಿದೆ.