ಬಳ್ಳಾರಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಅಖಂಡ ಜಿಲ್ಲೆಗೆ (ಬಳ್ಳಾರಿ–ವಿಜಯನಗರ)ಗೆ ಈ ವರ್ಷ ಶೇ.64.41ರಷ್ಟು ಫಲಿತಾಂಶ ಬಂದಿದೆ. ರ್ಯಾಂಕ್ ಪಟ್ಟಿಯಲ್ಲಿ ಎರಡೂ ಜಿಲ್ಲೆಗಳೂ 27ನೇ ಸ್ಥಾನದಲ್ಲಿವೆ.

ಕಳೆದ ವರ್ಷ ಶೇ.74.77ರಷ್ಟು ಫಲಿತಾಂಶ ಸಿಕ್ಕರೂ ರ್ಯಾಂಕ್ ಪಟ್ಟಿಯಲ್ಲಿ ಜಿಲ್ಲೆ 29ನೇ ಸ್ಥಾನದಲ್ಲಿತ್ತು. ಈ ವರ್ಷ ಫಲಿತಾಂಶ ಕುಸಿದರೂ ರ್ಯಾಂಕ್ನಲ್ಲಿ ಎರಡು ಸ್ಥಾನ ಮೇಲಕ್ಕೇರಿದೆ. 2023ರ ಫಲಿತಾಂಶದಲ್ಲೂ ಅವಿಭಜಿತ ಬಳ್ಳಾರಿ ಜಿಲ್ಲೆ 27ನೇ ಸ್ಥಾನದಲ್ಲಿತ್ತು.

ಕಲಾ ವಿಭಾಗದಲ್ಲಿ ವಿಜಯನಗರ ವಿದ್ಯಾರ್ಥಿಗಳು ಪಾರಮ್ಯ ಮೆರೆದಿದ್ದಾರೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಎರಡೂ ಜಿಲ್ಲೆಗಳ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ. ಮೂರು ವಿಭಾಗಗಳಲ್ಲಿ ಒಟ್ಟು 12 ಮಂದಿಗೆ ರ್ಯಾಂಕ್ ಸಿಕ್ಕಿದೆ.

ಎಂದಿನಂತೇ ಈ ಸಲವೂ ಕೊಟ್ಟೂರು, ಹೂವಿನ ಹಡಗಲಿಯ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ರ್ಯಾಂಕ್ಗಳನ್ನು ಬಾಚಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಘೋಷಿಸಲಾಗಿರುವ ಒಟ್ಟು 34 ರ್ಯಾಂಕ್ಗಳಲ್ಲಿ ವಿಜಯನಗರ ಜಿಲ್ಲೆಯ 10 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಈ ಪೈಕಿ ಬಹುತೇಕರು ಕನ್ನಡ ಮಾಧ್ಯಮದವರು ಎಂಬುದು ವಿಶೇಷ. ಅದರೆ, ಬಳ್ಳಾರಿ ಜಿಲ್ಲೆಯ ಯಾರೊಬ್ಬರೂ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ವಾಣಿಜ್ಯ ವಿಭಾಗದ 50 ರ್ಯಾಂಕ್ಗಳ ಪೈಕಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ತಲಾ ಒಬ್ಬೊಬ್ಬ ವಿದ್ಯಾರ್ಥಿ ಸ್ಥಾನ ಪಡೆದಿದ್ದಾರೆ. ಇನ್ನು ವಿಜ್ಞಾನದಲ್ಲಿ 44 ರ್ಯಾಂಕ್ಗಳು ಘೋಷಣೆಯಾಗಿದ್ದರೂ ಎರಡೂ ಜಿಲ್ಲೆಗಳ ಯಾರೊಬ್ಬರೂ ಸ್ಥಾನ ಪಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.