ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ಕಾರು ಸಮೇತ ₹46 ಲಕ್ಷ ನಗದು ದರೋಡೆ ಪ್ರಕರಣ; ಮೂವರ ಬಂಧನ

Published 1 ಜೂನ್ 2024, 10:28 IST
Last Updated 1 ಜೂನ್ 2024, 10:28 IST
ಅಕ್ಷರ ಗಾತ್ರ

ಹರಪನಹಳ್ಳಿ (ವಿಜಯನಗರ  ಜಿಲ್ಲೆ): ಕಾರು ಸಮೇತ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿ ಕುಳಿತು ಸಂಚು ರೂಪಿಸಲು ಸಹಕರಿಸಿದ್ದ ವ್ಯಕ್ತಿಯೊಬ್ಬ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಇಲ್ಲಿ ಬಂಧಿಸಿದ್ದು, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಗಂಗಾವತಿ ಮೂಲದವರಾದ ರವಿ, ನೊಂದ ವ್ಯಕ್ತಿಯ ಕಾರಿನಲ್ಲಿ ಕುಳಿತು ಸಂಚಿಗೆ ಸಹಕರಿಸಿದ್ದ ವಿ.ಸುನೀಲ್ ಮತ್ತು ರಾಜಾಹುಸೇನ್ ಆರೋಪಿಗಳು. ಬಂಧಿತರಿಂದ ₹10.33 ಲಕ್ಷ ನಗದು, ಎರಡು ಮೊಬೈಲ್, ಎರಡು ಕಾರು ಜಫ್ತಿ ಮಾಡಲಾಗಿದೆ. ತಲೆಮರೆಸಿಕೊಂಡವರಿಗಾಗಿ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ ತಿಳಿಸಿದರು.

ಮೇ 16ರಂದು ₹46 ಲಕ್ಷ ನಗದಿನೊಂದಿಗೆ ಮಹೇಶ್‌ ಮತ್ತು ವಿಜಯ್‌ ಎಂಬುವವರು ಹರಪನಹಳ್ಳಿ ಸಮೀಪ ಕಾರಿನಲ್ಲಿ ಹೋಗುತ್ತಿದ್ದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಆರೋಪಿಗಳು ಅಡ್ಡಗಟ್ಟಿ ನಗದು, ಕಾರು ಸಮೇತ ಪರಾರಿಯಾಗಿದ್ದರು.

ತನಿಖಾಧಿಕಾರಿ ಸಿಪಿಐ ಸಾಬಯ್ಯ, ಪಿಎಸ್ಐ ಗಳಾದ ಶಂಭುಲಿಂಗ ಹಿರೇಮಠ, ರಂಗಯ್ಯ, ಕಿರಣ್ ಕುಮಾರ, ಮಾಲೀಕ್ ಸಾಬ್ ಕಿಲಾರಿ, ಸಿಬ್ಬಂದಿ ಕೊಟ್ಟೂರೇಶ್, ಮುಬಾರಕ್, ರವಿ ದಾದಾಪುರ, ಚಂದ್ರಕಾಂತ ಯಾದವ್, ವಿಜಯಕುಮಾರ, ಮಲ್ಲಿಕಾರ್ಜುನ, ಕುಮಾರನಾಯ್ಕ ಕಾರ್ಯಾಚರಣೆ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT