ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾ‌ನಹೊಸಹಳ್ಳಿ | ಮಹಿಳೆ ಕೊಲೆ: ಇಬ್ಬರ ಬಂಧನ

Published 31 ಮಾರ್ಚ್ 2024, 16:01 IST
Last Updated 31 ಮಾರ್ಚ್ 2024, 16:01 IST
ಅಕ್ಷರ ಗಾತ್ರ

ಕಾ‌ನಹೊಸಹಳ್ಳಿ(ವಿಜಯನಗರ): ಸಮೀಪದ‌ ನಿಂಬಳಗೇರೆ ಅರಣ್ಯ ಪ್ರದೇಶದಲ್ಲಿ ಶನಿವಾರ ನಡೆದ ಮಹಿಳೆ‌ ಕೊಲೆಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶನಿವಾರ ನಿಂಬಳಗೇರೆ ಗ್ರಾಮದ ಫಾತಿಮಾ(35) ಅವರು ಪತ್ನಿ ಇಬ್ರಾಹಿಂ ಅವರೊಂದಿಗೆ ಬೈಕ್‌ನಲ್ಲಿ ಬರುವಾಗ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.

ಘಟನೆ ಕುರಿತು ಮೃತಳ ಪತಿ ಇಬ್ರಾಹಿಂ ದೂರು ನೀಡಿದ್ದು, ‘ಬೈಕ್‌ನಲ್ಲಿ ಹೋಗುವಾಗ ಇರ್ಫಾನ್ , ಆನಂದ್ ಬೈಕ್ ಅಡ್ಡಗಟ್ಟಿ ನೀ‌ನು, ನಿನ್ನ ಗಂಡನೊಂದಿಗೆ ರಾಜಿಯಾಗಿದ್ದಿಯ ಎಂದು ನನ್ನ ಪತ್ನಿಗೆ ಚಾಕುವಿನಿಂದ ಚುಚ್ಚಿದಾಗ ಅವಳು ಕೆಳಗಡೆ ಬಿದ್ದಳು.  ನಾನು ಭಯದಿಂದ ಸ್ವಲ್ಪ‌ ದೂರ ಬಂದು ಹಿಂದೆ ನೋಡಿದಾಗ ಆನಂದ್ ಎಂಬಾತ ಅವಳನ್ನು ನೆಲಕ್ಕೆ ಬಿಳಿಸಿ, ಇರ್ಫಾನ್ ಚಾಕುವಿನಿಂದ ಚುಚ್ಚುತ್ತಿದ್ದ. ನಾನು ಭಯದಿಂದ ಬಂದು ನಮ್ಮವರನ್ನು ಕರೆದುಕೊಂಡು ಹೋಗಿ ನೋಡಿದಾಗ ನನ್ನ ಹೆಂಡತಿ ಮೃತಪಟ್ಟಿದ್ದಳು’ ಎಂದು ಹೇಳಿದ್ದಾರೆ. ಅದೇ ಗ್ರಾಮದ ಇರ್ಫಾನ್, ಆನಂದ್ ಎಂಬುವವರನ್ನು ಬಂಧಿಸಿರುವ ಕಾ‌ನಹೊಸಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT