ಮಂಗಳವಾರ, ಮಾರ್ಚ್ 9, 2021
23 °C

ಕೋವಿಡ್‌-19| ವಿಜಯಪುರದಲ್ಲಿ ನಾಲ್ಕು ಜನ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕೋವಿಡ್-19 ಬಾಧಿತ ನಾಲ್ಕು ಜನ ಸಂಪೂರ್ಣ ಗುಣಮುಖರಾದ ಕಾರಣ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.

ಪಿ 276, ಪಿ305, ಪಿ313 ಮತ್ತು ಪಿ415 ಗುಣಮುಖರಾಗಿ ಮನೆಗೆ ತೆರಳಿದರು.  

ಗುಣಮುಖರಾದವರು ವಾರ್ಡ್ ನಿಂದ ಹೊರಬರುತ್ತಿದ್ದಂತೆ ಆಸ್ಪತ್ರೆಯ ವೈದ್ಯರು, ನರ್ಸ್ ಸೇರಿದಂತೆ ಜಿಲ್ಲಾಡಳಿತದ ಸಿಬ್ಬಂದಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಹೂವು, ಹಣ್ಣು ನೀಡಿ ಬೀಳ್ಕೊಟ್ಟರು. ರೋಗಿಗಳು ಸಹ ವೈದ್ಯರಿಗೆ, ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿ, ಆಂಬುಲೆನ್ಸ್ ಮೂಲಕ ಮನೆಗೆ ತೆರಳಿದರು. 

ಜಿಲ್ಲೆಯಲ್ಲಿ ಒಟ್ಟು 46 ಜನ ಕೊರೊನಾ ಸೋಂಕಿತರ ಪೈಕಿ, ಈಗಾಗಲೇ 15 ಜನ ಗುಣಮುಖರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು