ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ | ಬೈಕ್‌ ಕಳವು ಆರೋಪಿಗಳ ಬಂಧನ: 19 ಬೈಕ್ ವಶ

Published 3 ಏಪ್ರಿಲ್ 2024, 14:10 IST
Last Updated 3 ಏಪ್ರಿಲ್ 2024, 14:10 IST
ಅಕ್ಷರ ಗಾತ್ರ

ಆಲಮಟ್ಟಿ: ಬೈಕ್ ಕಳವು ಮಾಡುತ್ತಿದ್ದ ಖದೀಮರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಆಲಮಟ್ಟಿ ಪೊಲೀಸ್‌ ಠಾಣೆಯ ವ್ಯಾಪ್ತಿ ಹಾಗೂ ವಿಜಯಪುರ ಜಿಲ್ಲೆಯ ಇತರೆ ಕಡೆಗಳಲ್ಲಿ ಕಳುವು ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳಿಂದ ₹8.40 ಲಕ್ಷ ಮೌಲ್ಯದ ಒಟ್ಟು 19 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ತಿಕೋಟಾದ ಕುಂಬಾರ ವಸ್ತಿಯ ಶಶಿಕಾಂತ ರಾಜು ಕುಂಬಾರ(22), ಅದೇ ಊರಿನ ಭಾವಿಕಟ್ಟಿ ಓಣಿಯ ಸಂಜಯ ಸದಾಶಿವ ಕುಂಬಾರ (28) ಹಾಗೂ ಆಲಮೇಲ ಹಾವಚಟ್ಟರಕ್ಕಿ ಓಣಿಯ ಸತೀಶ ಮಲ್ಲಿಕಾರ್ಜುನ ಕುಂಬಾರ(27) ಬೈಕ್ ಕಳವು ಆರೋಪದ ಮೇಲೆ ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದರು.

ಕಳೆದ ಮಾರ್ಚ್ ತಿಂಗಳಲ್ಲಿ ಆಲಮಟ್ಟಿ ಮೊಗಲ್ ಗಾರ್ಡನ್ ಬಳಿ ಟಿಕೆಟ್ ಕೌಂಟರ್ ಹತ್ತಿರ ನಿಲ್ಲಿಸಿದ್ದ ಎರಡು ಬೈಕ್‌ಗಳನ್ನು ಕಳವು ಮಾಡಿದ್ದರು. ಈ ಪ್ರಕರಣದ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಯ ಇತರ ಕಡೆಗಳಲ್ಲಿಯೂ ಬೈಕ್ ಖದೀಮರು ಒಟ್ಟು 19ಕ್ಕೂ ಹೆಚ್ಚು ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಜಿಲ್ಲಾ ಪೋಲಿಸ್ ಅಧೀಕ್ಷಕ ಖುಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕ ಶಂಕರ ಮಾರಿಹಾಳ, ಅಪರಾಧ ವಿಭಾಗದ ಅಧೀಕ್ಷಕ ರಾಮನಗೌಡ ಹಟ್ಟಿ,ಬ.ಬಾಗೇವಾಡಿ ಪೋಲಿಸ್ ಉಪಾಧೀಕ್ಷಕ ಬಲ್ಲಪ್ಪ ನಂದಗಾವಿ ಇವರ ಮಾರ್ಗದರ್ಶನದಲ್ಲಿ ನಿಡಗುಂದಿ ಸಿ.ಪಿ.ಐ. ಶರಣಗೌಡ ಗೌಡರ, ಆಲಮಟ್ಟಿ ಪೊಲೀಸ್‌ ಠಾಣೆಯ ಪಿ.ಎಸ್.ಐ. ಸೀತಾರಾಮ ರಾಠೋಡ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ ಎಂದರು.

ಬೈಕ್ ಕಳವು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ಸಿಯಾದ ಬ.ಬಾಗೇವಾಡಿ ಡಿ.ಎಸ್.ಪಿ.ಬಲ್ಲಪ್ಪ ನಂದಗಾಂವಿ, ನಿಡಗುಂದಿ ಸಿ.ಪಿ.ಐ.ಶರಣಗೌಡ ಗೌಡರ, ಆಲಮಟ್ಟಿ ಪಿ.ಎಸ್.ಐ. ಸೀತಾರಾಮ ರಾಠೋಡ, ನಿಡಗುಂದಿ ಪಿ.ಎಸ್.ಐ.ಶಿವರಾಜ ಧರಿಗೋಣ, ಕೊಲ್ಹಾರ ಪಿ.ಎಸ್.ಐ. ಪ್ರವೀಣಕುಮಾರ ಗರೇಬಾಳ, ಎಂ.ವೈ. ನಾಟೀಕಾರ, ವಿ.ಎಸ್.ಹಿಪ್ಪರಗಿ, ಎಂ.ಬಿ.ಜಯಗೊಂಡರ, ಗಿರೀಶ್ ಚಲವಾದಿ, ಅನೀಲ ವೈ, ರೂಗಿ, ಎಸ್.ವೈ.ಭೈರವಾಡಿ, ಆರ್.ಎಸ್.ಚವ್ಹಾಣ, ಎಸ್.ಎ.ಗಿನ್ನಿ, ಬಿ.ಸಿ.ಪಾಟೀಲ, ಎಸ್.ಸಿ.ರೆಡ್ಡಿ, ಸುಭಾಸ ಆಲಮಟ್ಟಿ, ಶ್ರೀಶೈಲ ಕೆರೂರ, ಎಸ್.ಎನ್.ಪಾಟೀಲ ಹಾಗೂ ಜಿಲ್ಲಾ ಗಣಕಯಂತ್ರ ಘಟಕದ ಸಿಬ್ಬಂದಿ ಸುನೀಲ ಗೌಳಿ,ಗುಂಡು ಗಿರಣಿ ವಡ್ಡರ, ಎಂ.ಎ.ಭಗವಾನ, ಅಬ್ಬರ ಇಲಕಲ್ ಇವರು ಕೈಗೊಂಡ ಕಾರ್ಯವನ್ನು ಶ್ಲಾಘಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಬಹುಮಾನ ಘೋಷಿಸಿದರು.

ಆಲಮಟ್ಟಿಯಲ್ಲಿ ಬೈಕ್ ಕಳ್ಳರನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳು
ಆಲಮಟ್ಟಿಯಲ್ಲಿ ಬೈಕ್ ಕಳ್ಳರನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT