ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಲೋಕ್‌ ಅದಾಲತ್‌: ಒಂದಾದ ದಂಪತಿಗಳು

Published 11 ಸೆಪ್ಟೆಂಬರ್ 2023, 5:33 IST
Last Updated 11 ಸೆಪ್ಟೆಂಬರ್ 2023, 5:33 IST
ಅಕ್ಷರ ಗಾತ್ರ

ವಿಜಯಪುರ: ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ, ಜೀವನಾಂಶ ಕೋರಿ ದಾಖಲಾಗಿದ್ದ ಪ್ರಕರಣಗಳ 4 ಜೋಡಿಗಳು ಲೋಕ್‌ ಅದಾಲತ್‌ನಲ್ಲಿ ಸಂಧಾನ ಮಾಡಿಕೊಂಡು ಒಂದಾಗಿ ಜೀವನ ನಡೆಸುವ ತೀರ್ಮಾನ ತೆಗೆದುಕೊಂಡು ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡರು.

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಜಯಪುರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್‌ ಅದಾಲತ್‍ನಲ್ಲಿ ಜೋಡಿಗಳು ಒಂದಾಗಿ ಬಾಳುವುದಾಗಿ ಹಾಗೂ ಪ್ರಕರಣಗಳನ್ನು ಹಿಂದೆ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದವು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ ಸಮ್ಮುಖದಲ್ಲಿ 4 ಜೋಡಿಗಳು ಪರಸ್ಪರ ಹಾರ ಬದಲಿಸಿಕೊಂಡು ಒಂದಾದರು. ನ್ಯಾಯಾಧೀಶರು ಜೋಡಿಗಳಿಗೆ ಶುಭ ಹಾರೈಸಿದರು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಾನಾಯಕ, ಸುಭಾಸ ಸಂಕದ, ಸತೀಶ. ಎಲ್.ಪಿ, ಮಂಜುನಾಥ ಸಂಗ್ರೇಸಿ, ಮದ್ವೇಶ ಡಬೇರ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಸುಭಾಸ ಹೊಸಕಲ್ಲೆ, ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಶಿವಾನಂದ ಎಂ. ಜಿಪ್ರೇ, ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಪದ್ಮಶ್ರೀ ಮನ್ನೋಳಿ, ಮಲ್ಲಿಕಾರ್ಜುನ ಅಂಬಲಿ, ಕೆ. ಉಮಾ, ಲೋಕೆಶ ಹವಳೆ, ವಿಶ್ವನಾಥ ಕನಮರಡಿ, ಸ್ಮೀತಾ ಎಂ.ಎಂ, ಚಂದ್ರಕಾಂತ, ಮದ್ವೇಶ ಎಂ.ವಿ, ಚಾಂದನಿ ಜಿ.ಯು ಹಾಗೂ ಸಂದಾನಕಾರರಾದ, ಎಂ.ಜಿ.ಭೃಂಗಿಮಠ, ಡಿ.ಬಿ.ಮಠದ್, ಎಂ.ಭುಸಕೊಂಡ, ಆರ್.ಎಸ್.ಗೊಳಸಂಗಿ ಮಠ, ವಿ.ಜಿ.ಕುಲಕರ್ಣಿ, ಆರ್.ಕೆ.ಪಾಟೀಲ್, ದೀಪಾ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT