ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲಮೇಲ: ಅದ್ದೂರಿ ಗಣೇಶ ವಿಸರ್ಜನೆ ಇಂದು

ಪುಣೆ ಮಾದರಿ, ಮೈಸೂರಿನ ದಸರಾ ಮಾದರಿಯಲ್ಲಿ ಭವ್ಯ ಮೆರವಣಿಗೆ
Published : 11 ಸೆಪ್ಟೆಂಬರ್ 2024, 4:51 IST
Last Updated : 11 ಸೆಪ್ಟೆಂಬರ್ 2024, 4:51 IST
ಫಾಲೋ ಮಾಡಿ
Comments

ಆಲಮೇಲ: ಪಟ್ಟಣದ ವಿವಿಧ ಚೌಕಗಳ ಗಣೇಶ ಮೂರ್ತಿಗಳ ವಿಸರ್ಜನೆಗೆ ಬುಧವಾರ ರಾತ್ರಿಯಿಂದ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಪುಣೆ ಮಾದರಿ, ಮೈಸೂರಿನ ದಸರಾ ಮಾದರಿಯಲ್ಲಿ ಭವ್ಯ ಮೆರವಣಿಗೆಗೆ ಆಲಮೇಲ ಪಟ್ಟಣ ಸಜ್ಜಾಗಿದೆ.

ಇಲ್ಲಿಯ ಗಣೇಶ ವಿಸರ್ಜನೆ ಪ್ರಸಿದ್ಧಿ ಪಡೆದಿದ್ದು, ಪಕ್ಕದ ಕಲಬುರಗಿ, ಬಾಗಲಕೋಟೆ, ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯದಿಂದ ಗಣೇಶೋತ್ಸವ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.

ಆಲಮೇಲದ ಅನೇಕ ಚೌಕ್ ದಿಂದ ಸ್ತಬ್ಧಚಿತ್ರಗಳು ತಯಾರುಗೊಂಡಿವೆ. ಸಂಜೆ ಹೊತ್ತಿಗೆ ಮೆರವಣಿಗೆ ಪ್ರಾರಂಭವಾಗಲಿದ್ದು, ಅಬ್ಬರದ ಡಿಜೆ, ಕೋಲಾಟ ಜಾಂಜ್ ಪಥಕ್, ಹಲಗೆ ಮೇಳ, ಕೊಂಬು ವಾದನ, ಹತ್ತಾರು ಜಾನಪದ ತಂಡಗಳು ಮೆರವಣಿಗೆಯಲ್ಲಿ ಮೆರುಗು ನೀಡಲು ಅಣಿಯಾಗುತ್ತಿವೆ.

ಪಟ್ಟಣದ 15 ಗಣೇಶ ಮಂಡಳಿಗಳಿಗೆ ಒಂದು ಗಜಾನನ ಮಹಾಮಂಡಳ ರಚನೆಯಾಗುತ್ತದೆ. ಈ ಮಹಾಮಂಡಳಿಯ ಅಧ್ಯಕ್ಷರಾಗಿ ಕಳೆದ 15 ವರ್ಷಗಳಿಂದಲೂ ಇಸ್ಲಾಂ ಧರ್ಮದ ಮೈಬೂಬ ಮಸಳಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತ ಬಂದಿದ್ದು,  ಭಾವೈಕ್ಯದ ಸಂದೇಶ ಸಾರುವ ಈ ಗಣೇಶ ಉತ್ಸವ ಇತರೆಡೆಗೂ ಮಾದರಿಯಾಗಿದೆ. ಹಿಂದೂ ಮುಸ್ಲಿಮರು ಸೇರಿಕೊಂಡು ಅದ್ದೂರಿಯಾಗಿ ಉತ್ಸವ ಮಾಡುತ್ತಾರೆ.

ಕಲಾಕೃತಿಗಳ ಮೆರುಗು: ವಿಸರ್ಜನೆ ಮೆರವಣಿಗೆಯಲ್ಲಿ ಅನೇಕ ಕಲಾಕೃತಿಗಳು ಗಮನಸೆಳೆಯಲಿವೆ. ಗಣೇಶ ನಗರದ ಮಂಡಳಿಯಿಂದ ಆಧಿಶಕ್ತಿ ಅವತಾರ ಬಸವನಗರದಿಂದ ಸಪ್ತಸಂಗೀತ, ಮುಳಮಠ ಮಂಡಳದ ವತಿಯಿಂದ ಶಿವಾಜಿಯ ಕೋಟೆ, ಭವಾನಿ ಮಂಡಳದಿಂದ ದೇವಿ ಅವತಾರ, ರಾಘವೆಂದ್ರ ಮಂಡಳದಿಂದ ಬಾಲ ರಾಮನ ಅವತಾರ, ಹನುಮಾನ್ ಮಂಡಳದಿಂದ ರಾವಣ ಅವತಾರ, ದತ್ತ ಮಂಡಳದಿಂದ ತುಳಜಾಪೂರ ಅಂಬಾಭವಾನಿಯ ದ್ವಾರಬಾಗಿಲು, ಕಾಮನ ಕಟ್ಟಿ ಮಂಡಳದಿಂದ ಪಾಂಡುರಂಗ ವಿಠಲಲಕ್ಷ್ಮೀ ಮಂಡಳದಿಂದ ದ್ಯಾಮವ್ವನ ಜಾತ್ರೆ, ವೀರಭದ್ರೇಶ್ವರ ಮಂಡಳದಿಂದ ಬೆಲ್ಲದ ಬಾಗೇವಾಡಿಯ ದ್ಯಾಮ್ಮವ್ವನ ಜಾತ್ರೆ, ಗಾಂಧಿ ಮಂಡಳದಿಂದ ಶಿವಾಜಿ ನಿಂತಿರುವ ದೃಶ್ಯ, ಸಾವಳಗಿ ಶಿವಲಿಂಗೇಶ್ವರ ಚೌಕ್‌ನಿಂದ ಶಿವ–ನಂದಿ ಹೀಗೆ ಅನೇಕ ಬಗೆಯ ಸನ್ನಿವೇಶಗಳ ಕಲಾಕೃತಿಗಳು ರಾರಾಜಿಸಲಿವೆ. ಆಲಮೇಲದ ಪ್ರಮುಖ ರಸ್ತೆಗಳಲ್ಲಿ ರಾತ್ರಿಯಿಡೀ ಪ್ರಸಾದದ ವ್ಯವಸ್ಥೆಯೂ ತರುಣಮಿತ್ರರು ಮಾಡುವರು.

ಗಣೇಶ ವಿರ್ಸಜನೆಗೆ ಕಾಲಾಕೃತಿಗಳನ್ನು ತಯಾರಿಸುತ್ತಿರುವ ಆಲಮೇಲದ ಕಲಾವಿದರಾದ ಹೀರಿಯ ಕಲಾವಿದ ಮಲ್ಲಿಕಾರ್ಜುನ
ಗಣೇಶ ವಿರ್ಸಜನೆಗೆ ಕಾಲಾಕೃತಿಗಳನ್ನು ತಯಾರಿಸುತ್ತಿರುವ ಆಲಮೇಲದ ಕಲಾವಿದರಾದ ಹೀರಿಯ ಕಲಾವಿದ ಮಲ್ಲಿಕಾರ್ಜುನ
ಗಣೇಶ ವಿರ್ಸಜನೆಗೆ ಕಾಲಾಕೃತಿಗಳನ್ನು ತಯಾರಿಸುತ್ತಿರುವ ಆಲಮೇಲದ ಹಿರಿಯ ಕಲಾವಿದ ಸಂಗಯ್ಯ ಮುಳಮಠ 
ಗಣೇಶ ವಿರ್ಸಜನೆಗೆ ಕಾಲಾಕೃತಿಗಳನ್ನು ತಯಾರಿಸುತ್ತಿರುವ ಆಲಮೇಲದ ಹಿರಿಯ ಕಲಾವಿದ ಸಂಗಯ್ಯ ಮುಳಮಠ 
ಸ್ಥಬ್ದ ಚಿತ್ರಗಳ ತಯಾರಿಯಲ್ಲಿ..
ಸ್ಥಬ್ದ ಚಿತ್ರಗಳ ತಯಾರಿಯಲ್ಲಿ..
ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಎರಡು ಕಡೆ ಬೃಹತ್ ವೇದಿಕೆ ಸಿದ್ದವಾಗುತ್ತಿದ್ದು ಇಡೀ ರಾತ್ರಿ ಆಲಮೇಲ ಪಟ್ಟಣ ಸಾಂಸ್ಕೃತಿಕ ಕಳೆಯಿಂದ ಕೂಡಲಿದೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ
ಮೈಬೂಬ ಮಸಳಿ ಅಧ್ಯಕ್ಷ ಗಜಾನನ ಮಹಾಮಂಡಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT