ಶನಿವಾರ, ಅಕ್ಟೋಬರ್ 23, 2021
20 °C

ಕಳ್ಳರ ಬಂಧನ: ₹17.50 ಲಕ್ಷ ಮೌಲ್ಯದ ನಗ, ನಗದು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಗುಮ್ಮಟ ಪೊಲೀಸ್ ಠಾಣೆ ಪೊಲೀಸರು ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ ಅವರಿಂದ ₹17.50 ಲಕ್ಷ ಮೌಲ್ಯದ ನಗ, ನಗದು ವಶಪಡಿಸಿಕೊಂಡಿದ್ದಾರೆ.

ವಿಜಯಪುರ ನಗರದ ರೈಲು ನಿಲ್ದಾಣ ಸಮೀಪದ ಚೌಗಲೆ ಕಂಪೌಂಡ್‌ನ ಭರತ್ ಅಗರವಾಲ್(43), ಪೇಟೆ ಬಾವಡಿಯ ವಾಸಿಂ ಶೇಖ್(35) ಮತ್ತು ಮಹಾರಾಷ್ಟ್ರ ರಾಜ್ಯದ ಪುಣಿ ಜಿಲ್ಲೆಯ ಕಲವಾಡಿಯ ಅಕ್ಬರ್ ಶೇಖ್(32) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಿಂದ 70 ಗ್ರಾಂ ಬಂಗಾರದ ಆಭರಣ, 20 ಕೆ.ಜಿ.ಬೆಳ್ಳಿ ಆಭರಣ ಹಾಗೂ ₹ 5 ಲಕ್ಷ ನಗದು ಸೇರಿದಂತೆ ಒಟ್ಟು ₹17.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ, ಡಿಎಸ್ ಪಿ ಕೆ.ಸಿ.ಲಕ್ಷ್ಮೀನಾರಾಯಣ, ಸಿಪಿಐ ರಮೇಶ ಅವಜಿ, ಗೋಳಗುಮ್ಮಟ ಪಿಎಸ್ ಐ ಸೀತಾರಾಮ ಲಮಾಣಿ, ಜಲನಗರ ಠಾಣೆ ಪಿಎಸ್ ಐ ಎಸ್.ಎಂ.ಶಿರಗುಪ್ಪಿ, ಸೋಮೇಶ ಗೆಜ್ಜೆ, ಪ್ರೇಮಾ ಕುಚಬಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.