ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ: ಹತ್ತಿ ಬೀಜ ಉತ್ಪಾದನೆಗೆ ಕೃತಕ ಪರಾಗಸ್ಪರ್ಶ

ಗೋನಾಳದ ಚಂದ್ರಶೇಖರ ಬಿರಾದಾರ- ಜ್ಯೋತಿ ದಂಪತಿ ಪ್ರಯೋಗ
ಶಂಕರ ಈ.ಹೆಬ್ಬಾಳ
Published : 6 ಸೆಪ್ಟೆಂಬರ್ 2024, 6:11 IST
Last Updated : 6 ಸೆಪ್ಟೆಂಬರ್ 2024, 6:11 IST
ಫಾಲೋ ಮಾಡಿ
Comments

ಮುದ್ದೇಬಿಹಾಳ : ಹತ್ತಿ ಬೆಳೆಯಲ್ಲಿ ಬೀಜೋತ್ಪಾದನೆಗೆ ಕೃತಕ ಪರಾಗಸ್ಪರ್ಶದ ಮೂಲಕ  ಹೊಸ ಪ್ರಯತ್ನಕ್ಕೆ ತಾಲ್ಲೂಕಿನ ಗೋನಾಳ ಎಸ್.ಎಚ್.ಗ್ರಾಮದ ರೈತ ಚಂದ್ರಶೇಖರ ಬಿರಾದಾರ ಮತ್ತು ಜ್ಯೋತಿ ಬಿರಾದಾರ ದಂಪತಿ ಕೈ ಹಾಕುವ ಮೂಲಕ ಯಶಸ್ವಿಯಾಗಿದ್ದಾರೆ.

ತಮಗಿರುವ  ಎರಡು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆದಿರುವ ಅವರು ಎರಡು ತಿಂಗಳ ಅವಧಿಯವರೆಗೆ ಕೃತಕ ಪರಾಗಸ್ಪರ್ಶ ಮಾಡುವ ಸಲುವಾಗಿ 8-10 ಜನ ಕೂಲಿ ಕಾರ್ಮಿಕರನ್ನು ನೇಮಿಸಿದ್ದಾರೆ. ಹತ್ತಿ ಬೆಳೆಯನ್ನು ಎಕರೆಗೆ ಆರು ಕ್ವಿಂಟಲ್‌ನಂತೆ ಬೆಳೆಯಬಹುದು ಎನ್ನುತ್ತಾರೆ ಅವರು.

ಹತ್ತಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆದುಕೊಳ್ಳಲು ನಾವು ಹೊಸ ಕಾರ್ಯಕ್ಕೆ ಮುಂದಾಗಿದ್ದೇವೆ. ಗಜೇಂದ್ರಗಡದ ಕಂಪನಿಯವರು ಹತ್ತಿ ಬೀಜ ಕೊಟ್ಟಿದ್ದು, ಅವರಿಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡಿದ್ದೇವೆ ಎನ್ನುತ್ತಾರೆ.

ಬಿರಾದಾರ ಅವರ ಹೊಲದಲ್ಲಿ ಶ್ರೀಗಂಧ, ಜೇನು, ಅಂಜೂರು, ಪೇರು, ಲಿಂಬು, ಮಹಾಗನಿ, ಹೆಬ್ಬೇವು, ಈರುಳ್ಳಿ, ಸಜ್ಜೆ, ತೊಗರಿ, ಬ್ಯಾಡಗಿ ಮೆಣಸಿಣಕಾಯಿ ಬೆಳೆ ಬೆಳೆಯುತ್ತಿದ್ದಾರೆ.

ಈ ಸಲ ಒಂಬತ್ತು ಪಾಕೀಟ್ ಹತ್ತಿಯನ್ನು ಬಿತ್ತಿದ್ದಾರೆ. ಈರುಳ್ಳಿ ಬೆಳೆದು ಲಾಭ ಮಾಡಿಕೊಳ್ಳುತ್ತಿದ್ದೇವೆ. 15 ಜನಕ್ಕೆ ಹೊಲದಲ್ಲಿ ಕೆಲಸ ಕೊಟ್ಟಿದ್ದು, ಕೊಳವೆಬಾವಿಯಿಂದ ಹನಿ ನೀರಾವರಿ ಮಾಡಿಕೊಂಡಿದ್ದೇವೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಅಧಿಕಾರಿಗಳು ಮಾರ್ಗದರ್ಶನ ಮಾಡುತ್ತಿದ್ದು, ಅವರಿಂದ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದೇವೆ ಎಂದು ರೈತ ಬಿರಾದಾರ ತಿಳಿಸಿದರು.

ಜೇನು, ಶ್ರೀಗಂಧ ಬಿತ್ತನೆ:

ಬಿರಾದಾರ ಅವರ ಹೊಲದಲ್ಲಿ ಶ್ರೀಗಂಧದ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲದೇ, ಜೇನು ಕೃಷಿ ಮಾಡುತ್ತಿದ್ದು ಅದನ್ನು ಮಾರಾಟಕ್ಕೆ ಇಡದೇ ಮನೆ ಬಳಕೆಗೆ ಸ್ನೇಹಿತರಿಗೆ ಕೊಡುವ ಮೂಲಕ ಸಿಹಿ ಜೇನು ಹಂಚುವ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಈರುಳ್ಳಿ ಹಾಗೂ ಮೆಣಸಿಣಕಾಯಿ ಗಿಡಗಳನ್ನು ಮಿಶ್ರಬೆಳೆಯಾಗಿ ಬೆಳೆದಿದ್ದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
 
₹ 45 ಸಾವಿರದಿಂದ ₹ 50 ಸಾವಿರ ವರೆಗೆ ಬೀಜವನ್ನು ಖರೀದಿ ಮಾಡುತ್ತಾರೆ. ಅರಳಿ ₹ 20 ಸಾವಿರ ಕ್ವಿಂಟಾಲ್‌ನಂತೆ ಖರೀದಿಸುತ್ತಾರೆ. ತೋಟಗಾರಿಕೆ ಇಲಾಖೆಯಿಂದ ಸಾವಯುವ ಗೊಬ್ಬರವನ್ನು ಪಡೆದುಕೊಳ್ಳುತ್ತೇನೆ. ಕೃಷಿ ಇಲಾಖೆಯಿಂದ ಕೃಷಿಹೊಂಡ ಮಾಡಿಕೊಟ್ಟಿದ್ದು, ತೋಟಗಾರಿಕೆ ಇಲಾಖೆಯಿಂದ ಈರುಳ್ಳಿ ಘಟಕ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಅವರು.

ಹತ್ತಿ ಬೆಳೆಯಲ್ಲಿ ಕೃತಕ ಪರಾಗಸ್ಪರ್ಶದ ಮೂಲಕ ಬೀಜೋತ್ಪಾದನೆ ಇಳುವರಿ ಹೆಚ್ಚು ಪಡೆದುಕೊಳ್ಳಲು   ಬಿರಾದಾರ  ಹೊಸ ತಂತ್ರಜ್ಞಾನದ ಮೊರೆ ಹೋಗಿದ್ದು ಬರಲಿರುವ ದಿನಗಳಲ್ಲಿ ರೈತನಿಗೆ ಹತ್ತಿ ಅಧಿಕ ಆದಾಯ ತಂದುಕೊಡಲಿದೆ.  
-ರಾಜೇಶ್ವರಿ ನಾಡಗೌಡ ತಾಂತ್ರಿಕ ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT