ವಿಜಯಪುರ: ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ಸಾಹಿತಿ ಅನೀಲ ಗುನ್ನಾಪುರ ವಿರಚಿತ ‘ಸರ್ವೇ ನಂ.97’ ಕಥಾ ಸಂಕಲನಕ್ಕೆ ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿ ಲಭಿಸಿದೆ.

ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ನೀಡುವ 2024ನೇ ಸಾಲಿನ ಈ ಪ್ರಶಸ್ತಿಗೆ ಒಟ್ಟು 48 ಕೃತಿಗಳು ಬಂದಿದ್ದು ಅದರಲ್ಲಿ ಯುವ ಕಥೆಗಾರ ಅನಿಲ್ ಗುನ್ನಾಪುರ ಅವರ ‘ಸರ್ವೇ ನಂ.97’ ಕಥಾ ಸಂಕಲನ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ.

ಡಾ.ಗೀತ ವಸಂತ, ಡಾ.ಅಶೋಕ ಕುಮಾರ್ ರಂಜರೆ ಮತ್ತು ಡಾ.ಕೆ.ಪುಟ್ಟಸ್ವಾಮಿ ಅವರು ತೀರ್ಪುಗಾರರಾಗಿದ್ದರು. ಈ ಪ್ರಶಸ್ತಿಯು ₹ 25 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಜೂನ್ನಲ್ಲಿ ಮಂಡ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರತಿಷ್ಠಾನದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.