ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ| ಪೋಕ್ಸೊ ಕಾಯ್ದೆ ಜಾಗೃತಿ ಅವಶ್ಯ: ಎಚ್.ಕೆ ಯಡಹಳ್ಳಿ

Published 3 ಆಗಸ್ಟ್ 2023, 14:20 IST
Last Updated 3 ಆಗಸ್ಟ್ 2023, 14:20 IST
ಅಕ್ಷರ ಗಾತ್ರ

ವಿಜಯಪುರ: ವಿದ್ಯಾರ್ಥಿಗಳಲ್ಲಿ ಹಾಗೂ ಸಮುದಾಯಗಳಲ್ಲಿ ಪೋಕ್ಸೊ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವುದು ತುಂಬಾ ಅವಶ್ಯವಾಗಿದೆ. ಕೋವಿಡ್‌ ನಂತರ ಮಕ್ಕಳ ಮೇಲಿನ ದೌರ್ಜನ್ಯ ದುಪ್ಪಟ್ಟುಗೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು  ಸಿಕ್ಯಾಬ್‌ ಎಆರ್‌ಎಸ್‍ಐ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಎಚ್.ಕೆ ಯಡಹಳ್ಳಿ ಹೇಳಿದರು. 

ನಗರದ ಸಿಕ್ಯಾಬ್‌ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ, ‘ಪೋಕ್ಸೊ ಕಾಯ್ದೆ ಮತ್ತು ಅರಿವು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಕ್ಕಳ ಮೇಲಿನ ದೌರ್ಜನ್ಯವನ್ನು ವರದಿಮಾಡಲು ಪೋಕ್ಸೊ ಕಾಯ್ದೆಯಲ್ಲಿ ಯಾವುದೇ ಸಮಯದ ಮಿತಿ ಒದಗಿಸಿಲ್ಲ, ಸಂತ್ರಸ್ತರು ಯಾವುದೇ ಸಂದರ್ಭದಲ್ಲಿ ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಂಬಂಧಿಸಿದವರಿಗೆ ದೂರನ್ನು ಸಲ್ಲಿಸಬಹುದು’ ಎಂದರು.

ಪ್ರಾಚಾರ್ಯ ಎನ್.ಎಸ್.ಭೂಸನೂರ ಮಾತನಾಡಿ, ಪೋಕ್ಸೊ ಕಾಯ್ದೆಯಡಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಿಗೆ ಅಪರಾಧಕ್ಕೆ ತಕ್ಕಂತೆ ಶಿಕ್ಷೆಯ ಸ್ವರೂಪ ಭಿನ್ನವಾಗಿದೆ. ಪೋಕ್ಸೊ ಕಾಯ್ದೆ ಕುರಿತು ಸೂಕ್ತ ತಿಳವಳಿಕೆ ಅಗತ್ಯ ಎಂದರು

ಉಪನ್ಯಾಸಕ ಎ.ಎನ್.ರಿಸಾಲದಾರ, ಆರ್.ಕೆ.ಕೊಕಟನುರ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT