ಆಲಮಟ್ಟಿ(ವಿಜಯಪುರ): ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಆಲಮಟ್ಟಿ ಜಲಾಶಯ ಪ್ರದೇಶವನ್ನು ವಿಶೇಷ ವಿದ್ಯುತ್ ದೀಪದಿಂದ ಅಲಂಕೃತಗೊಳಿಸಲಾಗಿದೆ.

ಕೃಷ್ಣಾ ಭಾಗ್ಯ ಜಲ ನಿಗಮ ವತಿಯಿಂದ ಇದನ್ನು ಕೈಗೊಳ್ಳಲಾಗಿದ್ದು, ಆಲಮಟ್ಟಿ ಡ್ಯಾಂ ಸೈಟ್ ಪ್ರದೇಶ ನಾನಾ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

ಆಲಮಟ್ಟಿ ಜಲಾಶಯದಿಂದ ಭೋರ್ಗರೆಯುತ್ತಿರುವ ನೀರನ್ನು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ. ಇದು ನೋಡುಗರ ಮೈ ರೋಮಾಂಚನಗೊಳಿಸುತ್ತಿದೆ. 2.25 ಲಕ್ಷ ಕ್ಯುಸೆಕ್ ನೀರು ಜಲಾಶಯದ 26 ಗೇಟ್ಗಳಿಂದ ಬಿಡಲಾಗುತ್ತಿದ್ದು, ನೀರು ವರ್ಣಮಯವಾಗಿ ಕಾಣಿಸುತ್ತಿದೆ. ಪ್ರತಿ ನಾಲ್ಕು ಗೇಟ್ ಗಳಿಗೆ ಒಂದೊಂದು ಬಣ್ಣದಂತೆ ದೊಡ್ಡದಾಗಿ ಅಳವಡಿಸಲಾಗಿದೆ. ಈ ಮೂರು ಬಣ್ಣಗಳು ಸರಿಯುವಂತೆ ಸ್ಲೈಡಿಂಗ್ ಮಾಡಲಾಗಿದೆ. ನೋಡಲು ಅತ್ಯದ್ಭುತವಾಗಿ ಕಾಣುತ್ತಿದೆ.

ಜಲಾಶಯದ ಜತೆಗೆ ಆಲಮಟ್ಟಿ ಅಣೆಕಟ್ಟಿನ ಪ್ರವೇಶ ದ್ವಾರ, ವೃತ್ತ, ಎಂಟ್ರನ್ಸ್ ಪ್ಲಾಜಾ, ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿ ಇರುವ ಪ್ರವೇಶ ದ್ವಾರ, ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ಎಂಬ ನಾಮಫಲಕ ಹಾಗೂ ಜಲಾಶಯ ಹಾಗೂ ಆಲಮಟ್ಟಿ ಅಣೆಕಟ್ಟಿಗೆ ವಿವಿಧ ವರ್ಣಯಮ ತ್ರೀಡಿ ಬೆಳಕಿನ ವ್ಯವಸ್ಥೆ ಅಳವಡಿಸಲಾಗಿದೆ.

ಎಲ್ಲಾ ವಿದ್ಯುತ್ ದೀಪಗಳು ಎಲ್ಇಡಿ ಬಲ್ಪನ ವಿದ್ಯುತ್ ಅಲಂಕಾರವಾಗಿದ್ದು, ಆಲಮಟ್ಟಿಯ ಮಕಾಂನದಾರ್ ಲೈಟಿಂಗ್ಸ್ ನವರು ಈ ಎಲ್ಲಾ ವಿದ್ಯುತ್ ಅಲಂಕಾರ ಮಾಡಿದ್ದಾರೆ. ಇನ್ನೂ ಆಲಮಟ್ಟಿಯಲ್ಲಿರುವ ಕೆಬಿಜೆಎನ್ ಎಲ್ 20 ಕ್ಕೂ ಅಧಿಕ ಕಚೇರಿಗಳಿಗೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.

ಆಗಸ್ಟ್ 15 ರವರೆಗೆ: ಇಡೀ ಆಲಮಟ್ಟಿ ಪ್ರದೇಶದ ವರ್ಣಮಯ ವಿದ್ಯುತ್ ದೀಪಾಲಂಕಾರ ಆಗಸ್ಟ್ 15 ರವರೆಗೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.