ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್ ತಂತಿ ತಗುಲಿ ಸಹೋದರರು ಸಾವು

Published : 25 ಸೆಪ್ಟೆಂಬರ್ 2024, 18:06 IST
Last Updated : 25 ಸೆಪ್ಟೆಂಬರ್ 2024, 18:06 IST
ಫಾಲೋ ಮಾಡಿ
Comments

ವಿಜಯಪುರ: ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಬುಧವಾರ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಸಹೋದರರಿಬ್ಬರು ಸಾವಿಗೀಡಾಗಿದ್ದಾರೆ.

ಶ್ರೀಕಾಂತ ದುಂಡಪ್ಪ ವಿಜಾಪುರ (29), ರಾಜಕುಮಾರ ದುಂಡಪ್ಪ ವಿಜಾಪುರ (31) ಸಾವಿಗೀಡಾದ ದುರ್ದೈವಿಗಳು.

ತೋಟದಲ್ಲಿ ಟಿಸಿಯಿಂದ ಕೊಳವೆಬಾವಿಗೆ ವಿದ್ಯುತ್ ಪೂರೈಸಲು ಎಳೆಯಲಾಗಿದ್ದ ತಂತಿ ತುಂಡಾಗಿ ದ್ರಾಕ್ಷಿ ಪಡದ ಕಬ್ಬಿಣದ ಆ್ಯಂಗಲ್ ಗೆ ವಿದ್ಯುತ್ ಪ್ರವಹಿಸಿದೆ.

ವಿದ್ಯುತ್ ತಗುಲಿ ಶ್ರೀಕಾಂತ ಕೆಳಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಅಣ್ಣ ರಾಜಕುಮಾರ ತಮ್ಮನನ್ನು ರಕ್ಷಿಸಲು ಹೋದಾಗ ವಿದ್ಯುತ್ ತಗುಲಿ ಸಹೋದದರಿಬ್ಬರು ಸ್ಥಳದಲ್ಲೆ ಸಾವಿಗಿಡಾಗಿದ್ದಾರೆ ಎಂದು ತಿಕೋಟಾ ಪೋಲಿಸರು "ಪ್ರಜಾವಾಣಿ" ಗೆ ಮಾಹಿತಿ ನೀಡಿದರು.

ಬಾಬಾನಗರ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT