ಮುದ್ದೇಬಿಹಾಳ: ‘ಕುಲಕಸುಬು ಮಾಡುವವರನ್ನು ಸಮಾಜ ಈವರೆಗೂ ಸಮಾನತೆಯಿಂದ ಕಾಣುತ್ತಿಲ್ಲ. ಅವರನ್ನು ಮುಖ್ಯವಾಹಿನಿಗೆ ತರಬೇಕು. ಸಣ್ಣ ಸಣ್ಣ ಸಮಾಜಗಳು ಒಕ್ಕೂಟ ರಚಿಸಿಕೊಂಡು ಒಗ್ಗಟ್ಟಾಗಬೇಕು’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ತಾಲ್ಲೂಕಿನ ತಂಗಡಗಿ ಗ್ರಾಮದ ಹಡಪದ ಅಪ್ಪಣ್ಣ ಗುರುಪೀಠದಲ್ಲಿ ಭಾನುವಾರ ನಡೆದ ಲಿಂ.ಬಸವಪ್ರಿಯ ಹಡಪದ ಅಪ್ಪಣ್ಣ ಸ್ವಾಮೀಜಿ 17ನೇ ಪುಣ್ಯಸ್ಮರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಡಪದ ಜನಾಂಗ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಲಿಂ.ಬಸವಪ್ರಿಯ ಅಪ್ಪಣ್ಣನವರ ಗದ್ದುಗೆಯನ್ನು ದೇವಸ್ಥಾನವನ್ನಾಗಿ ಅಭಿವೃದ್ಧಿಪಡಿಸಲು ವಯಕ್ತಿಕವಾಗಿ ₹1 ಲಕ್ಷ ನೀಡುವುದಾಗಿ ತಿಳಿಸಿದರು.

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿದರು. ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ ಮಠದ ಗುರುಮಹಾಂತ ಸ್ವಾಮೀಜಿ, ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ, ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ಎಂ.ಎಸ್.ನಾವಿ, ಪ್ರಕಾಶ ಹಡಪದ, ವಿ.ಜಿ.ಕತ್ನಳ್ಳಿ, ನಿಂಗಪ್ಪ ನಾವಿ, ಮಹಾಂತೇಶ ಮೂಲಿಮನಿ, ಸಿ.ಎಫ್. ನಾವಿ, ನಾಗೇಶ ನಾಗೂರ, ಓಂಕಾರ ನಾವಿ, ಸೋಮನಗೌಡ ಪಾಟೀಲ ನಡಹಳ್ಳಿ ಇದ್ದರು.

ಸಿದ್ಧರಾಮಯ್ಯನವರ ಅವಧಿಯಲ್ಲಿ ಹಡಪದ ಅಪ್ಪಣ್ಣ ಗುರುಪೀಠದ ಅಭಿವೃದ್ಧಿಗೆ ₹1 ಕೋಟಿ ಅನುದಾನ ಒದಗಿಸಲಾಗಿದೆ. ಹಡಪದ ಸಮಾಜದ ಏಳಿಗೆಗೆ ಸರ್ಕಾರ ಬದ್ಧ
ಸಿ.ಎಸ್.ನಾಡಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.