ತಾಳಿಕೋಟೆ: ಶಾಂತಿ ಹಾಗೂ ಸೌಹಾರ್ದದಿಂದ ಬಕ್ರೀದ್ ಆಚರಿಸಬೇಕು ಎಂದು ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದೀನ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾವಹಿಸಲು ಗುರುವಾರದಿಂದಲೇ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗುತ್ತಿದೆ. ಹಬ್ಬದ ಎಲ್ಲ ಪ್ರಕ್ರಿಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಚರಿಸಬೇಕು. ಸಾಮೂಹಿಕ ಪ್ರಾರ್ಥನೆಗೆ ಈದ್ಗಾಗೆ ತೆರಳುವಾಗ ರಸ್ತೆ ಶಿಷ್ಟಾಚಾರಗಳನ್ನು ಪಾಲಿಸಬೇಕು’ ಎಂದರು.

ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಮುಸ್ಲಿಂ ಮುಖಂಡ ಮೋದಿನಸಾ ನಗಾರ್ಚಿ, ಪಿಎಸ್ಐ ರಾಮನಗೌಡ ಸಂಕನಾಳ ಮಾತನಾಡಿದರು. ಗಣ್ಯರಾದ ಶಶಿಧರ ಡಿಸಲೆ, ಹುಸೇನಸಾಬ ಜಮಾದಾರ, ಜಾವೇದ ಕೆಂಭಾವಿ, ಎಂ.ಎಚ್.ಕೆಂಭಾವಿ, ಪೀರ ಮೊಹಮ್ಮದ್ ಖಾಜಿ, ಶಫೀಕ ಇನಾಮದಾರ, ಆಸಿಫ್ ಕೆಂಭಾವಿ, ನದೀಮ ಕಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.