ವಿಜಯಪುರ: ‘ಕಲಬುರ್ಗಿಯ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಸಿಯುಇಟಿ ಮೂಲಕ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಜನವರಿ 14 ರವರೆಗೆ ಪ್ರವೇಶ ಪಡೆದುಕೊಳ್ಳಬಹುದು’ ಎಂದು ಕಲಬುರ್ಗಿ ಕೇಂದ್ರಿಯ ವಿಶ್ವವಿದ್ಯಾಲಯ ಹಿಂದಿ ವಿಭಾಗದ ಪ್ರಾಧ್ಯಾಪಕ ಪ್ರೊ.ಗಣೇಶ ಪವಾರ ಹೇಳಿದರು.

ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯದಲ್ಲಿ ಹಲವಾರು ಕೋರ್ಸ್ಗಳ ಅಧ್ಯಯನಕ್ಕೆ ಅವಕಾಶವಿದ್ದು, ಇಂಗ್ಲಿಷ್, ಹಿಂದಿ, ಕನ್ನಡ, ಭಾಷಾಶಾಸ್ತ್ರ, ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಅರ್ಥಶಾಸ್ತ್ರ, ಇತಿಹಾಸ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಪ್ರವಾಸೋದ್ಯಮ– ಪ್ರಯಾಣ ನಿರ್ವಹಣೆ, ಮನೋವಿಜ್ಞಾನ, ಭುಗೋಳಶಾಸ್ತ್ರ, ಭೂವಿಜ್ಞಾನ, ಗಣಿತ ಮೊದಲಾದ ಕೋರ್ಸ್ಗಳ ಪ್ರವೇಶ ಜೊತೆಗೆ ಎಂ.ಟೆಕ್ ಪವರ್ ಆ್ಯಂಡ್ ಎನರ್ಜಿ ಸೋರ್ಸಸ್ ಎಂಜಿನಿಯರಿಂಗ್, ಆರ್ಎಫ್ ಮೈಕ್ರೋವೇವ್ ಎಂಜಿನಿಯರಿಂಗ್ನಲ್ಲಿ ಅಧ್ಯಯನಕ್ಕೆ ಅವಕಾಶವಿದೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಎಂಪಿಎ, ಇನ್ಸ್ಟ್ರ್ಯೂಮೆಂಟಲ್ ಸಂಗೀತದಲ್ಲಿ ಎಂಪಿಎ, ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ ಹೀಗೆ ಅನೇಕ ಕೋರ್ಸ್ಗಳ ಅಧ್ಯಯನಕ್ಕೆ ಅವಕಾಶವಿದೆ’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶೇ8 ರಷ್ಟು ಮೀಸಲಾತಿ ಕಲ್ಪಿಸಲಾಗುತ್ತಿದೆ. ಕರ್ನಾಟಕದಾದ್ಯಂತ 16 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು. ಎಂ.ಟೆಕ್ನ ಶೇ50 ರಷ್ಟು ಸೀಟುಗಳನ್ನು ಸಿಯುಇಟಿ ಮೂಲಕ ಹಾಗೂ ಶೇ50 ರಷ್ಟು ಸೀಟುಗಳನ್ನು ಗೇಟ್ ಮೂಲಕ ಭರ್ತಿ ಮಾಡಲಾಗುತ್ತಿದೆ’ ಎಂದರು.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ತೊಂದರೆ ಎದುರಿಸಿದರೆ ಅದರ ನಿವಾರಣೆಗಾಗಿ ವಿಶೇಷ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗಿದೆ. ತೊಂದರೆ ಎದುರಿಸುವ ವಿದ್ಯಾರ್ಥಿಗಳು 011-40759000 ಅಥವಾ 011-69227700 ಸಂಪರ್ಕಿಸಬಹುದು. ಅಥವಾ ಜಾಲತಾಣದ ವಿಳಾಸ cuetpg@nta.ac.in ಕ್ಕೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ www.nta.ac.in, https://exams.nta.nic.in/cuet-pg/ ಭೇಟಿ ನೀಡಬಹುದು ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.