ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಯಕ್ಕೂ ಮೀರಿದ ಜ್ಞಾನ ಪ್ರದರ್ಶಿಸುವ ಬಾಲಪ್ರತಿಭೆ ಸಮನ್ವಿತಾ ಕರಿಕಟ್ಟಿ

ಕನ್ನಡ, ಇಂಗ್ಲಿಷ್‌ ವರ್ಣಮಾಲೆ, ರಾಜ್ಯಗಳ ರಾಜಧಾನಿ ಹೆಸರು ಹೇಳುವ ಬಾಲೆ ಸಮನ್ವಿತಾ ಕರಿಕಟ್ಟಿ
Last Updated 22 ಅಕ್ಟೋಬರ್ 2020, 8:23 IST
ಅಕ್ಷರ ಗಾತ್ರ

ವಿಜಯಪುರ: ಎರಡೂವರೆ ವರ್ಷದ ಬಹುತೇಕ ಮಕ್ಕಳು ಅಪ್ಪ, ಅಮ್ಮ, ಅವ್ವ, ಅಜ್ಜ, ಕಾಕಾ, ಮಾಮಾ ಎಂಬ ಎರಡಕ್ಷಗಳ ತೊದಲ ಮಾತನಾಡಲು ಆರಂಭಿಸುತ್ತಿವೆ. ಆದರೆ, ಇಲ್ಲೊಬ್ಬ ಬಾಲಪ್ರತಿಭೆ ದೇಶದ ಎಲ್ಲ ರಾಜ್ಯಗಳ ರಾಜಧಾನಿ ಹೆಸರು, ಇಂಗ್ಲಿಷ್‌ ಅಕ್ಷರಗಳು, ಕನ್ನಡದ ಸ್ವರ, ವ್ಯಂಜನಗಳು, ಒಂದರಿಂದ 10 ಅಂಕಿಗಳನ್ನು ಕನ್ನಡ, ಇಂಗ್ಲಿಷ್‌, ಹಿಂದಿಯಲ್ಲಿ ಪಟಪಟನೆ ಹೇಳುತ್ತಾಳೆ!

ಹೌದು, ಅಚ್ಚರಿ ಎನಿಸಿದರೂ ನಿಜ. ನಗರದ ಅಲ್‌ ಅಮಿನ್‌ ವೈದ್ಯಕೀಯ ಕಾಲೇಜು ಎದುರಿನ ಸೇನಾ ನಗರದ ನಿವಾಸಿಗಳಾದ ಎಕ್ಸಲೆಂಟ್‌ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕಿ ಅಶ್ವಿನಿ ಮತ್ತು ಖಾಸಗಿ ಕಂಪನಿ ಉದ್ಯೋಗಿವಿರೇಶ್‌ ಕರಿಕಟ್ಟಿ ಅವರ ಪುತ್ರಿಸಮನ್ವಿತಾ ಕರಿಕಟ್ಟಿ ತನ್ನ ಪ್ರಾಯಕ್ಕೂ ಮೀರಿದ ಜ್ಞಾನ ಪ್ರದರ್ಶನದಿಂದ ಇದೀಗ ಮನೆ ಮಾತಾಗಿದ್ದಾಳೆ.

ಪ್ರಾಣಿಗಳ ಚಿತ್ರಗಳನ್ನು ತೋರಿಸಿದರೆ ಅವುಗಳನ್ನು ಗುರುತಿಸಿ ಹೆಸರು ಹೇಳುತ್ತಾಳೆ. ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ಹೇಳುವ ಜೊತೆಗೆ ಚಿತ್ರದಲ್ಲಿ ಅವರನ್ನು ಗುರುತಿಸುತ್ತಾಳೆ. ಅಷ್ಟೇ ಅಲ್ಲ, ದೇಶ, ರಾಜ್ಯ, ರಾಷ್ಟ್ರಪತಿ, ಪ್ರಧಾನಮಂತ್ರಿ ಹೆಸರನ್ನು ಹೇಳುತ್ತಾಳೆ.ವಾರ, ತಿಂಗಳ ಹೆಸರನ್ನು ಅರಳು ಹುರಿದಂತೆ ಪಟಪಟನೆ ಹೇಳುತ್ತಾಳೆ.

ಯಾವುದೇ ಪ್ರಶ್ನೆ ಕೇಳಿದರೂ ತನ್ನ ತೊದಲ ಮಾತಿನಲ್ಲಿ ಸರಿಯಾದ ಉತ್ತರವನ್ನು ಕೊಡುತ್ತಿರುವುದು ತಂದೆ, ತಾಯಿಗೆ ಸಂತೋಷ ತಂದಿದೆ. ಬಾಲಕಿಯ ಪ್ರತಿಭೆಗೆ ಆಜುಬಾಜಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಷ್ಟು ಚಿಕ್ಕ ಮಗು ಇಷ್ಟೊಂದನ್ನೆಲ್ಲ ಹೇಗೆ ನೆನಪಿಟುಕೊಂಡು ಹೇಳಲು ಸಾಧ್ಯ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಕುರಿತು ಬಾಲಕಿ ತಾಯಿ ಅಶ್ವಿನಿ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ,‘ಮಗುವಿಗೆ ಊಟ ಮಾಡಿಸುವಾಗ, ಆಟ ಆಡಿಸುವಾಗ, ಸ್ನಾನ ಮಾಡಿಸುವಾಗ ಹೇಳಿಕೊಡುತ್ತಿದ್ದೆ. ಒಂದೆರಡು ಸಲ ಹೇಳಿದರೂ ಸಾಕು ಅದನ್ನು ಅವಳು ನೆನಪಿಟ್ಟುಕೊಳ್ಳುತ್ತಿದ್ದಳು. ಮರುದಿನ ಕೇಳಿದರೆ ಸರಾಗವಾಗಿ ಹೇಳುತ್ತಿದ್ದಳು ಎಂದು ತಿಳಿಸಿದರು.

‘ಮಗಳ ಸ್ಮರಣಶಕ್ತಿ ಗಮನಿಸಿ ದಿನ ಸ್ವಲ್ವ ಸ್ವಲ್ಪ ವಿಷಯಗಳನ್ನು ಹೇಳಿಕೊಡಲು ಆರಂಭಿಸಿದೆ. ಪ್ರಾಣಿ, ಪಕ್ಷಿಗಳ, ಅಕ್ಷರಗಳ ಚಾರ್ಟ್‌ ಹಾಗೂ ಪುಸ್ತಕಗಳನ್ನುಅವಳ ತಂದೆ ತಂದುಕೊಟ್ಟರು. ನಾನು ಮತ್ತು ಅವರು ಸಮಯ ಸಿಕ್ಕಾಗ ಹೇಳಿಕೊಡುತ್ತಿದ್ದೆವು. ಜೊತೆಗೆ, ಅಜ್ಜ–ಅಜ್ಜಿಯೂ ಹೇಳಿಕೊಡುತ್ತಾರೆ’ ಎಂದರು.

****

ಮಗಳಿಗೆ ಯಾವುದೇ ಒತ್ತಡ ಹೇರಿ ಏನನ್ನೂ ಕಲಿಸಿಲ್ಲ. ಅವಳಿಷ್ಟದಂತೆ ಬಿಟ್ಟಿದ್ದೇವೆ. ಹೊಸದನ್ನು ಹೇಳಿದರೆ ಆಸಕ್ತಿಯಿಂದ ಕೇಳಿ ತಿಳಿದುಕೊಂಡು, ನೆನಪಿಟ್ಟುಕೊಳ್ಳುತ್ತಾಳೆ
ಅಶ್ವಿನಿ ಕರಕಟ್ಟಿ, ಬಾಲಕಿಯರ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT