ಮಂಗಳವಾರ, ಜೂನ್ 28, 2022
26 °C

ಮಕ್ಕಳ ಸಾಗಾಟ; ಐವರು ಮಕ್ಕಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ತಾಯಿಯಿಂದ ಪ್ರತ್ಯೇಕ ವಾದ, ಪೋಷಕರಿಂದ ದೂರ ವಾದ ಐವರು ಮಕ್ಕಳನ್ನು ಸಾಗಾಟ ಮಾಡುತ್ತಿರುವುದನ್ನು ಮಂಗಳವಾರ ಪತ್ತೆಹಚ್ಚಿದ ಮಹಿಳಾ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ.

ನಗರದ ಅಥಣಿ ಗಲ್ಲಿ ನಿವಾಸಿಯಾದ ಚಡಚಣ ತಾಲ್ಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಟಾಪ್ ನರ್ಸ್ ಜಯಮಾಲಾ ಬಿಜಾಪುರ ಆರೋಪಿ.

‘ಜಯಮಾಲಾ ತನ್ನ ಮನೆಯಲ್ಲಿ ಐದು ವರ್ಷದ ಗಂಡು ಹಾಗೂ ಮೂರು ವರ್ಷದ ಹೆಣ್ಣು ಮಗುವನ್ನು ಸಾಕಿದ್ದು, ಉಳಿದಂತೆ ನಗರದ ದರಬಾರ್ ಗಲ್ಲಿಯ ಶಾಂತಮ್ಮ ಹೆರಕಲ್ ಬಳಿ ಮೂರು ವರ್ಷದ ಹೆಣ್ಣು ಮಗು, ಅಥಣಿ ಗಲ್ಲಿಯ ಚಂದ್ರಮ್ಮಾ ಮಾದರ ಬಳಿ 11 ತಿಂಗಳ ಹೆಣ್ಣು ಮಗುವನ್ನು ಬಿಟ್ಟಿದ್ದಾಳೆ. ಅಲ್ಲದೆ, ಸೊಲ್ಲಾಪುರ ನಗರದ ಕುಟುಂಬಕ್ಕೆ ಐದು ವರ್ಷದ ಹೆಣ್ಣು ಮಗುವನ್ನು ಸಾಗಾಟ ಮಾಡಿದ್ದಳು. ಈ ಎಲ್ಲ ಮಕ್ಕಳನ್ನು ರಕ್ಷಣೆ ಮಾಡಿ, ಸಿದ್ದೇಶ್ವರ ದತ್ತು ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು