ಸಿಂದಗಿ: ‘ಹಸಿ ಕಸ, ಒಣ ಕಸ ವಿಂಗಡಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತೆ ಕಾಪಾಡಲು ಮನವಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶ ಕಾರ್ಯಾಲಯದ ಆರೋಗ್ಯ ವಿಭಾಗದ ಮುಖ್ಯಸ್ಥ ಅರುಣ ವಿಧಾತೆ ಪೌರಕಾರ್ಮಿಕರಿಗೆ ಸಲಹೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಗರಸಭೆ ವತಿಯಿಂದ ಸ್ವಚ್ಛ ಭಾರತ ಮಿಷನ್, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಸಹಯೋಗದಲ್ಲಿ ಸಾಮರ್ಥ್ಯಾಭಿವೃದ್ಧಿ ಘಟಕದಡಿ ಘನತ್ಯಾಜ್ಯ ನಿರ್ವಹಣೆ ಕುರಿತು ಪೌರ ಕಾರ್ಮಿಕರಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಗರಸಭೆ ಕಾರ್ಯಾಲಯದ ಹಿರಿಯ ಆರೋಗ್ಯ ನಿರೀಕ್ಷಕ ನಬಿರಸೂಲ್ ಉಸ್ತಾದ್ ಮಾತನಾಡಿದರು. ಬೆಂಗಳೂರು ಎನ್ಜಿಒ ಪ್ರಮುಖರಾದ ನಗ್ಮಾ ಮತ್ತು ಶಶಿನಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು. ನಗರಸಭೆ ಪೌರಾಯುಕ್ತ ರಾಜಶೇಖರ್ ಎಸ್. ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಆರೋಗ್ಯ ವಿಭಾಗದ ಇಂದುಮತಿ ಮಣೂರ, ತೇಜಸ್ವಿನಿ ಮಾಗಿ, ಸಲ್ಮಾ ಯಡ್ರಾಮಿ ಹಾಗೂ ಪೌರ ನೌಕರರ ಸಂಘ ತಾಲ್ಲೂಕು ಶಾಖೆ ಅಧ್ಯಕ್ಷ ಕಲ್ಲಪ್ಪ ಚೌರ ಇದ್ದರು.

ಸಿಂದಗಿ ನಗರಸಭೆಯ 60 ಪೌರಕಾರ್ಮಿಕರು, ಆಲಮೇಲ ಪಟ್ಟಣ ಪಂಚಾಯಿತಿಯ 39 ಪೌರಕಾರ್ಮಿಕರು ಮತ್ತು ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿಯ 40 ಪೌರಕಾರ್ಮಿಕರು ಪಾಲ್ಗೊಂಡರು.

ಇದೇ ವೇಳೆ, ಪ್ಲಾಸ್ಟಿಕ್ ಬಳಕೆ ಬೇಡ ಎಂಬ ಘೋಷಣೆಯಡಿ 200 ಪೌರಕಾರ್ಮಿಕರಿಗೆ ಬಟ್ಟೆ ಚೀಲ, ನೀರಿನ ಸ್ಟೀಲ್ ಬಾಟಲಿಯ ಕಿಟ್ ವಿತರಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.