ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾಂಗ್ರೆಸ್‌ ರಾಜ್ಯವನ್ನು ಸಾಲಗಾರ ಮಾಡಲು ಹೊರಟಿದೆ: ಮುಖ್ಯಮಂತ್ರಿ ಚಂದ್ರು ಆರೋಪ

Published : 15 ಅಕ್ಟೋಬರ್ 2023, 14:08 IST
Last Updated : 15 ಅಕ್ಟೋಬರ್ 2023, 14:08 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ಸಮಸ್ಯೆಗಳ ಸರಮಾಲೆ
ವಿಜಯಪುರ ಜಿಲ್ಲೆ ಸಮಸ್ಯೆಗಳ ಸರಮಾಲೆಯನ್ನು ಹೊಂದಿದೆ. ಜಿಲ್ಲೆಯ ರಸ್ತೆಗಳಲ್ಲಿ ತಗ್ಗು ಗುಂಡಿಗಳಾಗಿ ದ್ವಿಚಕ್ರ ವಾಹನ ಸವಾರರು ಓಡಾಡುವುದು ಕಷ್ಟವಾಗಿದೆ. ನಗರದಲ್ಲಿ 24X7 ಕುಡಿಯುವ ನೀರು 10 ದಿನಕ್ಕೊಮ್ಮೆ ಲಭ್ಯವಾಗುತ್ತಿದೆ. ಬರಗಾಲದಲ್ಲಿ ಕಂಗೆಟ್ಟ ರೈತರಿಗೆ ಲೋಡ್‌ಶೇಡ್ಡಿಂಗ್‌ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಎಎಪಿ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.   ಜಿಲ್ಲೆಯಲ್ಲಿನ ಈ ಎಲ್ಲ ಸಮಸ್ಯೆಗಳು ರಾಜ್ಯದ ಪ್ರಬಲ ಮಂತ್ರಿಗಳು ಜಿಲ್ಲೆಯವರಾದ ಎಂ.ಬಿ ಪಾಟೀಲ ಅವರಿಗೆ ಕಾಣಿಸುತ್ತಿಲ್ಲವೇ?. ನಗರ ಶಾಸಕರಿಗೆ ಟೀಕೆ ಮಾಡಲು ಬಾಯಿಯಿದೆ ಆದರೆ ಅಭಿವೃದ್ಧಿ ಮಾಡಲು ಬಾಯಿಯಿಲ್ಲ. ಕೇಂದ್ರ ಸರ್ಕಾರದಿಂದ ಅನುದಾನವನ್ನು ತಂದು ಅಭಿವೃದ್ಧಿ ಮಾಡಲು ಅವಕಾಶವಿದ್ದರೂ ಮಾಡುತ್ತಿಲ್ಲ ಎಂದು ಚಂದ್ರು ಆರೋಪಿಸಿದರು.
ಮೂರು ಪಕ್ಷದಲ್ಲಿ ಕೋಟಿ ಆಸ್ತಿವಂತರು
ರಾಜ್ಯದ ಜನತೆ ಕಾಂಗ್ರೆಸ್‌ ಬಿಜೆಪಿ ಜೆಡಿಎಸ್‌ ಮೂರು ಪಕ್ಷಗಳಿಗೆ ಅಧಿಕಾರ ನೀಡಿ ನೋಡಿದೆ. ಮೂರು ಪಕ್ಷದಲ್ಲಿ ಸುಮಾರು ಶೇ.70 ರಷ್ಟು ಜನ ಎಂ.ಎಲ್‌.ಎ ಎಂಪಿಗಳಾದ ಮೇಲೆ 100 ಕೋಟಿ ಆಸ್ತಿಯನ್ನು ಮಾಡಿದ್ದಾರೆ. ಅಧಿಕಾರ ಬಂದ ನಂತರ ಇಷ್ಟು ಪ್ರಮಾಣದ ದುಡ್ಡು ಯಾವ ರೀತಿ ದುಡದಿದ್ದಾರೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು. ರಾಜ್ಯದಾದ್ಯಂತ ಎಎಪಿ ಪಕ್ಷ ಪ್ರವಾಸ ಮಾಡುತ್ತಿದೆ. ಹಳ್ಳಿಗಳಿಗೆ ಹೋಗಿ ಜನರೊಂದಿಗೆ ಸಮಾಲೋಚನೆ ಮಾಡಲಾಗುತ್ತಿದೆ. ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ. ಬಡ ಮಕ್ಕಳು ಬೆಳೆಯಲು ಎಚ್ಚೆತ್ತುಕೊಳ್ಳಲು ಎಎಪಿ ಜಾಗೃತಿ ಮೂಡಿಸುತ್ತಿದೆ. ರಾಜ್ಯದ ತೆರಿಗೆ ಹಣ ಸರಿಯಾಗಿ ಬಳಕೆಯಾಗಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕರಿಗೆ ಮನವರಿಕೆ ಮಾಡುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT