ಬುಧವಾರ, ಜೂಲೈ 8, 2020
28 °C
ಇಬ್ಬರು ರೋಗಿಗಳು ಗುಣಮುಖ ಆಸ್ಪತ್ರೆಯಿಂದ ಬಿಡುಗಡೆ

ಕೊರೊನಾ ಸೋಂಕಿತರ ಸಂಖ್ಯೆ 70ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಭಾನುವಾರ 28 ವರ್ಷ ವಯಸ್ಸಿನ ಮಹಿಳೆ(ಪಿ2136)ಯೊಬ್ಬರಿಗೆ ಕೋವಿಡ್-19 ಸೊಂಕು ತಗುಲಿದೆ. 

ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆ ಸೋಂಕು ತಗುಲಿದ್ದು, ಅವರನ್ನು ಕ್ವಾರೈಂಟನ್ ಮಾಡಿ, ಅವಶ್ಯಕ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 70 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 44 ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ 22ಕೋವಿಡ್ ಸೋಂಕಿತ ರೋಗಿಗಳಿದ್ದು, ನಾಲ್ವರು ಮೃತಪಟ್ಟಿದ್ದಾರೆ.

ಇಬ್ಬರು ಗುಣಮುಖ:

ಕೋವಿಡ್-19ದಿಂದ ಗುಣಮುಖರಾದ ಇಬ್ಬರು ಸೋಮವಾರ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾದರು. ಈ ಮೂಲಕ ಒಟ್ಟು 44 ರೋಗಿಗಳು ಗುಣಮುಖರಾಗಿ, ಮನೆಗೆ ಮರಳಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದ್ದಾರೆ.

22 ವರ್ಷ ವಯಸ್ಸಿನ ಯುವಕ(ಪಿ594) ಹಾಗೂ 20 ವರ್ಷ ವಯಸ್ಸಿನ ಯುವತಿ (ಪಿ856) ಗುಣಮುಖರಾಗಿ, ಬಿಡುಗಡೆಯಾದರು. ಆಸ್ಪತ್ರೆಯಲ್ಲಿ ಸದ್ಯ 22 ಸಕ್ರಿಯ ಕೋವಿಡ್ ರೋಗಿಗಳಿದ್ದು, ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಗುಣಮುಖ ರೋಗಿಗಳ ಬಿಡುಗಡೆ ಸಂದರ್ಭದಲ್ಲಿ ಡಾ ಶರಣಪ್ಪ ಕಟ್ಟಿ, ಡಾ ಲಕ್ಕಣ್ಣವರ್,ಡಾ ಸಂದೀಪ್ ಸಜ್ಜನ್, ಆರ್.ಎನ್. ಸಾವಳಗಿ, ಡಾ ಬಿರಾದಾರ್, ಡಾ ಇಂಗಳೆ, ಜಗದೀಶ್ ಮಾಣಕರ್, ಜಿ.ಸಿ.ಉಪಾಸೆ, ಅಶೋಕ್ ಬೆಳ್ಳಣ್ಣವರ್, ಸಂತೋಷ ಬಿರಾದಾರ್, ಅಜಿತ್ ಕೊಟ್ನಿಸ್ ಇದ್ದರು.

ವಿಚಾರಣ ಸಂಕಿರಣ ನಾಳೆ

 ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ಜಿಲ್ಲಾಡಳಿತದ ಅಶ್ರಯದಲ್ಲಿ ಬಿ.ಎಲ್.ಡಿ.ಇ ನರ್ಸಿಂಗ್‌ ಕಾಲೇಜಿನಲ್ಲಿ ಮೇ27ರಂದು ಬೆಳಿಗ್ಗೆ 9.30ಕ್ಕೆ   ‘ಕೋವಿಡ್-19 ತಡೆಗಟ್ಟುವಲ್ಲಿ ಜಿಲ್ಲಾಡಳಿತದ ಪಾತ್ರ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಆನ್‍ಲೈನ್ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎಂ.ಬಿ.ಬಿರಾದಾರ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.

ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗಾಗಿ ಕೊರೊನಾ ಕಾಯಿಲೆ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಎಷ್ಟು ಪರಿಣಾಮಕಾರಿಯಾದ ಕ್ರಮಗಳನ್ನು ಜಾರಿ ತಂದಿದೆ ಮತ್ತು ತರುವಲ್ಲಿ ಶ್ರಮಿಸುತ್ತಿರುವ ಕುರಿತ ತಮ್ಮ ಅಭಿಪ್ರಾಯಗಳನ್ನು ಆನ್‍ಲೈನ್ http://forms.gle/uD2pJFu8XdXYZEs7 ಮತ್ತು www.bldeanursing.ac.in ಲಿಂಕ್ ಮೂಲಕ ಹೆಸರು ನೋಂದಣಿ ಮಾಡಿ, ವಿಚಾರ ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಬಿ.ಎಂ.ಪಾಟೀಲ್ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಶೋಲ್ಮೋನ್ ಚೋಪಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು