ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಖಾತೆಗಳಿಗೆ ₹360 ಕೋಟಿ ಜಮಾ: ಡಿಸಿ ಟಿ.ಭೂಬಾಲನ್

Published 19 ಮೇ 2024, 15:23 IST
Last Updated 19 ಮೇ 2024, 15:23 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಅರ್ಹ ರೈತರಿಗೆ ಗರಿಷ್ಠ ₹2 ಸಾವಿರ ವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರದ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯ 2,59,063 ರೈತರ ಖಾತೆಗಳಿಗೆ ₹360.10 ಕೋಟಿ ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿದ್ದು, ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾದ ಬಗ್ಗೆ ಪರಿಹಾರ ಜಾಲತಾಣವಾದ  https://parihara.karnataka.gov.in ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಜಿಲ್ಲೆಯ ಒಟ್ಟು 18,727 ಫಲಾನುಭವಿ ರೈತರಿಗೆ ಪರಿಹಾರ ಧನವು ಜಮಾವಾಗಿರುವುದಿಲ್ಲ. ಇಂತಹ ರೈತರಿಗೆ ತಿಳಿವಳಿಕೆ ನೀಡಿ, ಅವಶ್ಯಕ ದಾಖಲೆಗಳನ್ನು ಪಡೆದು, ಪರಿಹಾರ ಧನ ಜಮಾ ಮಾಡಲು ಕ್ರಮ ವಹಿಸುವಂತೆ ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಸೂಚಿಸಲಾಗಿದ್ದು, ಆದಷ್ಟು ಬೇಗನೆ ಬಾಕಿ ಫಲಾನುಭವಿಗಳ ಖಾತೆಗೆ ಪರಿಹಾರ ಧನ ಜಮೆಯಾಗಲಿದೆ ಎಂದು ತಿಳಿಸಿದ್ದಾರೆ.

ಬೆಳೆಹಾನಿ ಪರಿಹಾರ ಧನ ಜಮೆ ಕುರಿತು ಫಲಾನುಭವಿಗಳಿಗೆ ಮಾಹಿತಿ ಒದಗಿಸಲು ತಾಲ್ಲೂಕಾವಾರು ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ ಸಹ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ತಾಲ್ಲೂಕುವಾರು ವಿವರ:

ಆಲಮೇಲ ತಾಲ್ಲೂಕಿನ 19,295 ಫಲಾನುಭವಿಗಳ ಪೈಕಿ 18,186 ರೈತರ ಖಾತೆಗೆ ₹35.45 ಕೋಟಿ, ಬಬಲೇಶ್ವರ ತಾಲ್ಲೂಕಿನ 20,020 ಫಲಾನುಭವಿಗಳ ಪೈಕಿ 19,294 ರೈತರ ಖಾತೆಗೆ ₹31.36 ಕೋಟಿ, ಬಸವನಬಾಗೇವಾಡಿ ತಾಲ್ಲೂಕಿನ 27,174 ಫಲಾನುಭವಿಗಳ ಪೈಕಿ 25,307 ರೈತರ ಖಾತೆಗೆ ₹33.46 ಕೋಟಿ, ವಿಜಯಪುರ ತಾಲ್ಲೂಕಿನ 18,912 ಫಲಾನುಭವಿಗಳ ಪೈಕಿ 17,743 ರೈತರ ಖಾತೆಗೆ ₹ 23.88 ಕೋಟಿ ಜಮಾ ಮಾಡಲಾಗಿದೆ.

ಚಡಚಣ ತಾಲ್ಲೂಕಿನ 19,840 ಫಲಾನುಭವಿಗಳ ಪೈಕಿ 18,409 ರೈತರ ಖಾತೆಗೆ ₹24.97 ಕೋಟಿ, ದೇವರಹಿಪ್ಪರಗಿ ತಾಲ್ಲೂಕಿನ 21,088 ಫಲಾನುಭವಿಗಳ ಪೈಕಿ 19,452 ರೈತರ ಖಾತೆಗೆ ₹22.95 ಕೋಟಿ, ಇಂಡಿ ತಾಲ್ಲೂಕಿನ 45,542 ಫಲಾನುಭವಿಗಳ ಪೈಕಿ 42,320 ರೈತರ ಖಾತೆಗೆ ₹64.71 ಕೋಟಿ, ಕೊಲ್ಹಾರ ತಾಲ್ಲೂಕಿನ 10,336 ಫಲಾನುಭವಿಗಳ ಪೈಕಿ 9,783 ರೈತರ ಖಾತೆಗೆ ₹19.19 ಕೋಟಿ ಜಮಾ ಮಾಡಲಾಗಿದೆ.

ಮುದ್ದೇಬಿಹಾಳ ತಾಲ್ಲೂಕಿನ 21,860 ಫಲಾನುಭವಿಗಳ ಪೈಕಿ 20,035 ರೈತರ ಖಾತೆಗೆ ₹25.69 ಕೋಟಿ, ನಿಡಗುಂದಿ ತಾಲ್ಲೂಕಿನ 7,785 ಫಲಾನುಭವಿಗಳ ಪೈಕಿ 7,246 ರೈತರ ಖಾತೆಗೆ ₹11.58 ಕೋಟಿ, ಸಿಂದಗಿ ತಾಲ್ಲೂಕಿನ 25,203 ಫಲಾನುಭವಿಗಳ ಪೈಕಿ 23,324 ರೈತರ ಖಾತೆಗೆ ₹33.87 ಕೋಟಿ ಜಮಾ ಮಾಡಲಾಗಿದೆ.

ತಾಳಿಕೋಟೆ ತಾಲ್ಲೂಕಿನ 20,516 ಫಲಾನುಭವಿಗಳ ಪೈಕಿ 19,438 ರೈತರ ಖಾತೆಗೆ ₹21.47 ಕೋಟಿ, ತಿಕೋಟಾ ತಾಲ್ಲೂಕಿನ 10,149 ಫಲಾನುಭವಿಗಳ ಪೈಕಿ 9,526 ರೈತರ ಖಾತೆಗೆ ₹11.46 ಕೋಟಿ ಜಮೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT