ಅಧಿಕಾರಿ, ವೈದ್ಯರು ಬರುವವರೆಗೂ ಜಿಲ್ಲಾಧಿಕಾರಿಗಳು ತಾವೇ ಖುದ್ದು ವೃದ್ಧನಿಗೆ ಗ್ಲುಕೋಸ್ ನೀಡಿ, ಬ್ರೆಡ್ ತಿನ್ನಿಸಿ ಸಂತೈಸಿದರು. ಚೇತರಿಸಿಕೊಂಡ ವೃದ್ದ ‘ಬಡೇ ಸಾಬ್ ಕೋ ಮೇರಾ ಧನ್ಯವಾದ, ಭಗವಾನ್ ಉನ್ಕೋ ಖುಷ್ ರಖೇ’ ಎಂದು ಜಿಲ್ಲಾಧಿಕಾರಿಗಳಿಗೆ ಕೈ ಮುಗಿದನು. ಸ್ಥಳಕ್ಕೆ ಬಂದ ಅಧಿಕಾರಿಗಳು, ವಾಹನದಲ್ಲಿ ವೃದ್ಧನನ್ನು ಅನಾಥ ಆಶ್ರಮಕ್ಕೆ ಸಾಗಿಸಿ, ಆರೈಕೆ ಮಾಡಿದರು. ವೃದ್ಧನ ಊರು ಯಾವುದು, ಹೆಸರು ಏನೆಂಬ ಮಾಹಿತಿ ಲಭ್ಯವಾಗಿಲ್ಲ.