ಬುಧವಾರ, ಸೆಪ್ಟೆಂಬರ್ 22, 2021
23 °C
ಶಿವಾ ಸಿ. ಬಿರಾದಾರ ನಿರ್ಮಾಣದ ಕಿರುಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

ವಿಜಯಪುರ: ಸಮ್ಮಾನ್ ಕಿರುಚಿತ್ರ ತಂಡಕ್ಕೆ ಡಿಸಿ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಜಯಪುರ ಜಿಲ್ಲೆಯ ಶಿವಾ ಸಿ. ಬಿರಾದಾರ ನಿರ್ಮಾಣದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಸಮ್ಮಾನ್’ ಕಿರುಚಿತ್ರ ತಂಡವನ್ನು ಜಿಲ್ಲಾಧಿಕಾರಿ ಪಿ. ಸುನಿಲ್‌ ಕುಮಾರ್‌ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಪ್ರೇಮ ಮತ್ತು ಸ್ವಾವಲಂಭಿ ಪರಿಕಲ್ಪನೆ ಆಧರಿತ  ‘ಸಮ್ಮಾನ್’ ಕಿರುಚಿತ್ರವನ್ನು ಸಾರ್ವಜನಿಕರು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸುವಂತೆ ಹೇಳಿದರು.

ಕಿರುಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಮೂರು ನಿಮಿಷ ಅವಧಿಯ ಕಿರುಚಿತ್ರವು ಒಂದು ಪುಟ್ಟ ಹುಡುಗಿ ಸುಪರ್ ಮಾರ್ಕೆಟ್‍ನಲ್ಲಿ ಸಾಮಾನು ಕೊಳ್ಳುವಾಗ ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್ ಎನ್ನುವ ಬದಲು ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಹೇಳುವ ಮೂಲಕ ದೇಶಭಕ್ತಿ ಸಾರುತ್ತಾಳೆ ಮತ್ತು ಆತ್ಮ ನಿರ್ಭರ ಅಭಿಯಾನಕ್ಕೆ ಕರೆಕೊಡುತ್ತಾಳೆ.

ಕಿರುಚಿತ್ರದಲ್ಲಿ ಬಾಲಕಿ ಖುಷಿ ಜಯೇಶ ಕಾಳೆ, ಆಕಾಶ ವಜ್ರದ, ಸ್ವಾತಿ ಪವಾರ, ದಿವ್ಯಾ ಪವಾರ, ಐಶ್ವರ್ಯ ಪವಾರ, ಸಂಜಯ ಪವಾರ, ಮಧುಸುಧನ್ ಯಲಗುದ್ರಿ, ಭಿಮರಾವ ಕೋಟ್ಯಾಳ, ಶಾರದಾ ಸಾಳುಂಕೆ, ಸಚಿನ್ ಜಾಧವ್, ಓಂಕಾರ ಕಾಳೆ, ಮತ್ತು ಎ.ಎಸ್ ಅಮೋಘಗೌಡ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ರಾಮನಗೌಡ ಯತ್ನಾಳ, ಮಧುಸುಧನ್ ಯಲಗುಡ್ರಿ ಮತ್ತು ಪಾಂಡು ಸಾಹುಕಾರ ದೊಡಮನಿ ಈ ಕಿರು ಚಿತ್ರ ನಿರ್ಮಾಣ ಮಾಡಿದ್ದಾರೆ.

ಕಿರುಚಿತ್ರದಲ್ಲಿ ಕ್ಯಾಮೆರಾ ವರ್ಕ್‌ ಹಾಗೂ ಡಿ.ಐ ಅನ್ನು ಪ್ರಶಾಂತ ಅಂಕಿರೆಡ್ಡಿ ಮತ್ತು ಸೌಂಡ್‍ವರ್ಕ್ ಅನ್ನು ಬಿ.ಸುರೇಶ ಅವರು ಮಾಡಿದ್ದು, ಕಿರಣ ಶಿವಣ್ಣವರ, ಹೇಮಂತ ಕಣ್ಮನಿ, ಸಂತೋಷ ಬಿರಾದಾರ, ಎಸ್.ಬಿ ಶ್ರೀಶೈಲ್ ಕುಮಶಗಿ, ಮೋಹಿತ್ ಇಂಡಿ, ಅರುಣ ಬಿಪಿ, ಸುಪ್ರೀಯಾ ನಿಪ್ಪಾಣಿ ತಾಂತ್ರಿಕ ತಂಡದಲ್ಲಿ ಕಾರ್ಯ ನಿರ್ವಹಿಸಿ ಕಿರುಚಿತ್ರದ ಯಶಸ್ಸಿಗೆ ಕಾರಣರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು