ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಯೋಜನೆ ಜನರಿಗೆ ತಲುಪಿಸಿ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿಕೆ
Last Updated 21 ಸೆಪ್ಟೆಂಬರ್ 2021, 13:08 IST
ಅಕ್ಷರ ಗಾತ್ರ

ವಿಜಯಪುರ:ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಪ್ರತಿ ಮನೆಗೆ ಮುಟ್ಟವಂತೆ ಎಸ್. ಸಿ ಮೋರ್ಚಾದ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.

ಬಿಜೆಪಿ ಎಸ್.ಸಿ. ಮೋರ್ಚಾ ನಗರ ಮಂಡಲ ವತಿಯಿಂದ ನಗರದದಲ್ಲಿ ಮಂಗಳವಾರ ನಡೆದ ಎಸ್.ಸಿ. ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು.

ಅನ್ಯಾಯಕ್ಕೊಳಗಾದ ದಲಿತರನ್ನು ಬಲಿಷ್ಠಗೊಳಿಸುವ ಮತ್ತು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಬಿಜೆಪಿ ಮಾಡುತ್ತಿದೆ. ದಲಿತರನ್ನು ವಿದ್ಯಾವಂತರಗಬೇಕು ಎಂದು ಹೇಳಿದರು.

ನಗರ ಅಧ್ಯಕ್ಷ ವಿಠ್ಠಲ ನಡುವಿನಕೇರಿ ಮಾತನಾಡಿ, ಕಾಂಗ್ರೆಸ್ ಪಕ್ಷವು ದಲಿತರನ್ನು ಬಳಸಿಕೊಂಡು ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ದಲಿತರಿಗೆ ವಂಚಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಕಾಂಗ್ರೆಸ್‍ ಪಕ್ಷದವರು 75 ವರ್ಷದಿಂದ ಸ್ವಾರ್ಥ ರಾಜಕಾರಣ ಮಾಡುತ್ತಾ ದಲಿತರಿಗೆ ವಂಚಿಸುತ್ತಿದ್ದಾರೆ. ಸದ್ಯ ಎಲ್ಲಾ ಕ್ಷೇತ್ರದಲ್ಲೂ ದಲಿತರು ಮುಂದಿದ್ದಾರೆ ಎಂದು ಹೇಳಿದರು.

ಎಸ್. ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ತೀರಿಕೊಂಡಾಗ ಅವರ ಅಂತ್ಯಕ್ರಿಯೆಗೆ ಜಾಗ ಕೊಡದೇ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದರು.

ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಅವರು ಕಾರ್ಯಕರ್ತರಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು. ಎಸ್.ಎಸ್. ಎಲ್. ಸಿ ಮತ್ತು ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ನಗರ ಮಂಡಲದ ಅಧ್ಯಕ್ಷ ಮಳುಗೌಡ ಪಾಟೀಲ, ಮಲ್ಲಮ್ಮ ಜೋಗೂರ, ಗೀತಾ ಕುಗ್ಗುನೂರ, ಭರತ ಕೋಳಿ, ಪಾಪುಸಿಂಗ ರಜಪೂತ, ರಾಜೇಶ ತವಸೆ, ಸಂಪತ್ತ ಕೋಹಳ್ಳಿ, ರಾಜೇಂದ್ರ ವಾಲಿ, ವಿನಾಯಕ ದಹಿಂಡೆ, ಅಭೀಷೇಕ ಸಾವಂತ, ಶ್ರೀನಿವಾಸ ಕಂದಗಲ, ಮುತ್ತಣ್ಣ ಸಾಸನೂರ, ಉದಯ ಕನ್ನೋಳ್ಳಿ, ಸದಾಶಿವ ಚಲವಾದಿ, ಪ್ರಹ್ಲಾದ ಕಾಂಬಳೆ, ಸಚೀನ ಸವನಳ್ಳಿ, ಬಾಬು ಜಾಧವ, ಸತೀಶ ರಾಠೋಡ, ದುರ್ಗೇಶ ತಿಕೋಟಿಕರ, ಶ್ರೀಕಾಂತ ಗಚ್ಚಿನಮನಿ, ಸಾಗರ ಶೇರಖಾನಿ, ಬಾಬು ಮನಗೂಳಿ, ರಮೇಶ ದೇವಕರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT