ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗಮೇಶ ಬಿರಾದಾರಗೆ ‘ದೇಸಿ ಸನ್ಮಾನ’ ಪ್ರಶಸ್ತಿ

Published 11 ಜುಲೈ 2024, 14:23 IST
Last Updated 11 ಜುಲೈ 2024, 14:23 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದ ನೆಲೆ ಪ್ರಕಾಶನ ಸಂಸ್ಥೆಯ ಅಂಗ ಸಂಸ್ಥೆಯಾದ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ 2024ನೇ ಸಾಲಿನ ‘ದೇಶಿ ಸನ್ಮಾನ’ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಹಿರಿಯ ಜಾನಪದ ವಿದ್ವಾಂಸ ಸಂಗಮೇಶ ಬಿರಾದಾರ ಭಾಜನರಾಗಿದ್ದಾರೆ.

ಪ್ರಶಸ್ತಿ ₹11 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪುರಸ್ಕೃತರ ಜೀವನ ಸಾಧನೆಯ ಕುರಿತಾದ ಗ್ರಂಥ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್‌ನಲ್ಲಿ ಸಿಂದಗಿ ಪಟ್ಟಣದಲ್ಲಿ ನಡೆಯಲಿದೆ.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾಡಿನ ಹಿರಿಯ ಜಾನಪದ ವಿದ್ವಾಂಸ ಶ್ರೀರಾಮ ಇಟ್ಟಣ್ಣವರ, ಎಂ.ಎಸ್.ಮದಭಾವಿ ಇದ್ದಾರೆ.

ಸಂಗಮೇಶ ಬಿರಾದಾರ ಅವರು ಜಾನಪದವೂ ಸೇರಿದಂತೆ ಕವಿತೆ, ವಿಮರ್ಶೆ, ಜೀವನ ಚರಿತ್ರೆ, ಸಂಪಾದನೆ ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

‘ಚಾಪ ಹಾಕತೀವ ಡಪ್ಪಿನ ಮ್ಯಾಲ’ ಎನ್ನುವ ಹೆಸರಿನ ಮೂರು ಸಂಪುಟಗಳನ್ನು ಜಾನಪದ ಲೋಕಕ್ಕೆ ನೀಡಿದ್ದಾರೆ. ‘ತೇರದಾಳದ ಲಾವಣಿಕಾರರು’ ಅವರ ಮತ್ತೊಂದು ಮಹತ್ವದ ಕೃತಿ. ಇಂಥ ವಿದ್ವಾಂಸರಿಗೆ ಪ್ರಶಸ್ತಿ ನೀಡಲು ಪ್ರತಿಷ್ಠಾನ ಹೆಮ್ಮೆ ಪಡುತ್ತದೆ ಎಂದು ಸಂಚಾಲಕ ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT