ಮುದ್ದೇಬಿಹಾಳ ಪಟ್ಟಣದ ತಾಲ್ಲೂಕಾ ಪಂಚಾಯತ್ ಕಚೇರಿಯ ಆವರಣದಲ್ಲಿ ಅನಾಥವಾಗಿ ಬಿದ್ದಿರುವ ಅಂಗವಿಕಲರ ಸಾಮಗ್ರಿ.
ತಾಪಂ ಕಚೇರಿ ಆವರಣದಲ್ಲಿರುವ ಅಂಗವಿಕಲರ ಸಾಮಗ್ರಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
-ನಿಂಗಪ್ಪ ಮಸಳಿ ತಾಪಂ ಇಒ
ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕು ಸೇರಿ 60 ಟ್ರೈಸಿಕಲ್‌ಗಳು ಬಂದಿದ್ದು ಏಳು ಹಾಗೆ ಉಳಿದುಕೊಂಡಿವೆ. ಒಂದು ವೀಲ್ ಚೇರ್ ಸಣ್ಣ ಗಾಲಿ ವಾಕರ್ ಆರು ಉಳಿದಿವೆ. ಕೃತಕ ಕಾಲು ಮತ್ತು ಕ್ಯಾಲಿಪರ್ ಹಳೆ ಮಾಡಲ್ ಇರುವುದರಿಂದ ಅವುಗಳನ್ನು ಯಾರು ತೆಗೆದುಕೊಂಡು ಹೋಗಿಲ್ಲ.ಆಯ್ಕೆಯಾದ ಫಲಾನುಭವಿಗಳೆಲ್ಲ ತಮಗೆ ಬ್ಯಾಟರಿ ಚಾಲಿತಇಂಧನ ಚಾಲಿತ ತ್ರಿಚಕ್ರ ವಾಹನವೇ ಬೇಕು ಎಂದು ಇವುಗಳನ್ನು ಒಯ್ದಿಲ್ಲ. ಜಿಲ್ಲಾ ಕಚೇರಿಗೆ ವಾಪಸ್ ಕಳಿಸುತ್ತೇನೆ.