ಬುಧವಾರ, ಸೆಪ್ಟೆಂಬರ್ 29, 2021
20 °C

ವಿಜಯಪುರ: ಆಸ್ಕರ್ ಫರ್ನಾಂಡಿಸ್‌ಗೆ ಜಿಲ್ಲಾ ಕಾಂಗ್ರೆಸ್‌ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್‌ ಅವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ  ಕಾರ್ಯಾಲಯದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಆಸ್ಕರ್ ಫರ್ನಾಂಡಿಸ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಎರಡು ನಿಮಿಷ ಮೌನ ಆಚರಣೆಯ ಮೂಲಕ ನುಡಿ ನಮನ ಸಲ್ಲಿಸಲಾಯಿತು.

ರಾಜ್ಯಸಭಾ, ಲೋಕಸಭಾ ಸದಸ್ಯ ಸದಸ್ಯರಾಗಿ, ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಆಸ್ಕರ್‌ ಫರ್ನಾಂಡಿಸ್‌ ಅವರು  ಪಕ್ಷನಿಷ್ಠರಾಗಿ ಕೆಲಸ ನಿರ್ವಹಿಸಿದ್ದರು. ಅವರ ನಿಧನದಿಂದ ಪಕ್ಷಕ್ಕೆ ಅಪಾರ ಹಾನಿಯಾಗಿದೆ ಎಂದು  ಕಾಂಗ್ರೆಸ್ ಮುಖಂಡ ಅಬ್ದುಲ್‌ ಹಮೀದ ಮುಷ್ರೀಫ್ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಮುಖಂಡರಾದ ಜಮೀರ್‌ ಅಹ್ಮದ್‌ ಬಕ್ಷಿ,  ವಿಜಯಕುಮಾರ ಘಾಟಗೆ, ವಸಂತ ಹೊನಮೊಡೆ, ಐ.ಎಂ.ಇಂಡೀಕರ, ಇರ್ಫಾನ್‌ ಶೇಖ್‌, ರಜಾಕ್‌ ಕಾಖಂಡಕಿ, ಆಸ್ಮಾ ಕಾಲೇಬಾಗ, ಶಮೀಮ ಅಕ್ಕಲಕೋಟ, ಇಲಿಯಾಸ್‌ ಸಿದ್ಧಕಿ, ತಾಜ್‌ವುದ್ದಿನ್‌ ಖಲಿಫಾ, ಮಹಾದೇವ ಜಾಧವ, ಸುಂದರಪಾಲ್‌ ರಾಠೋಡ, ಶಂಕರಸಿಂಗ್‌ ಹಜೇರಿ, ಹಾಜಿ ಪಿಂಜಾರ, ಸುಲ್ತಾನಸಾಬ್‌ ಅಗಸಿಮನಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು