ಭಾನುವಾರ, ಆಗಸ್ಟ್ 14, 2022
25 °C

ಡೊಮನಾಳ ಗುಡ್ಡ ಹಸಿರಿಕರಣಕ್ಕೆ ನೆರವು: ಸಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತಾಲ್ಲೂಕಿನ ತಿಡಗುಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡೊಮನಾಳ ಗುಡ್ಡದಲ್ಲಿ ನಡೆದಿರುವ ಹಸಿರಿಕರಣ ಕಾರ್ಯಕ್ಕೆ ಎಲ್ಲ ರೀತಿಯ ನೇರವು ನೀಡುವುದಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಭರವಸೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುಡ್ಡದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ನಿವೃತ್ತ ಉಪ ತಹಶೀಲ್ದಾರ್‌ ಎನ್.ಡಿ.ಪಾಟೀಲ್ ಅವರ ಮತ್ತು ತಂಡದ ಹಸಿರಿಕರಣ ಕಾರ್ಯವನ್ನು ಶ್ಲಾಘಿಸಿದರು.

ವಿಜಯಪುರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಾಬು ಸಜ್ಜನ ಮಾತನಾಡಿ, ಗುಡ್ಡದಲ್ಲಿ 37 ಪ್ರಭೇದದ ಸಸ್ಯಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ಎಲ್ಲ ಕಾರ್ಯಗಳಿಗೆ ಎನ್.ಡಿ. ಪಾಟೀಲ್ ನೇತೃತ್ವವನ್ನು ವಹಿಸಿದ್ದಾರೆ ಎಂದರು.

ಗುಡ್ಡದ ಮೇಲಿರುವ ದಾವಲ್ ಮಲ್ಲಿಕ್‌ ದರ್ಗಾದಲ್ಲಿ ಅತಿಥಿಗಳು ಪೂಜೆ ಸಲ್ಲಿಸಿದರು.

ಡಾ.ಮಹಾಂತೇಶ ಬಿರಾದಾರ, ಡಿಸಿಎಫ್‌ ಸರೀನಾ ಸಿಕ್ಕಲಗಾರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಿ. ಬಿ. ಬಿರಾದಾರ, ಡಾ.ಮುರಗೇಶ ಪಟ್ಟಣಶೆಟ್ಟಿ, ನಿವೃತ್ತ ಎಂಜಿನಿಯರ್‌‌ ಎಸ್.ಎ.ಪಾಟೀಲ, ತಿಡಗುಂದಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮನಗೌಡ ಬಿರಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರುಗೌಡ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು