ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೋಣಿ ನದಿಯಲ್ಲಿ ಪ್ರವಾಹ

Last Updated 29 ಜೂನ್ 2020, 8:55 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಜನ ಸಂಚಾರಕ್ಕೆ ಅಡಚಣೆಯಾಗಿದೆ.
ತಾಳಿಕೋಟೆಯಿಂದ ಹಡಗಿನಾಳ ಮಾರ್ಗದಲ್ಲಿನ ನೆಲಮಟ್ಟದ ಸೇತುವೆ ಡೋಣಿ ನದಿ ಪ್ರವಾಹ ದಲ್ಲಿ ಮುಳುಗಿದೆ. ಜನ, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದರು ಅಪಾಯವನ್ನು ಲೆಕ್ಕಿಸದೆ ಜನರು ಸಂಚಾರಿಸುತ್ತಿರುವುದು ಕಂಡುಬಂತು.

ಮುಕಿಹಾಳ, ಢವಳಗಿ, ಪಡೇಕನೂರ, ಲಿಂಗದಳ್ಳಿ, ಹಂದ್ರಾಳ ವ್ಯಾಪ್ತಿಯಲ್ಲೂ ಭಾರಿ ಮಳೆಯಿಂದ ಜಮೀನುಗಳು ಜಲಾವೃತವಾಗಿದೆ. ಬಿತ್ತನೆ ಮಾಡಲಾಗಿದ್ದ ತೊಗರಿ ನೀರಿನಲ್ಲಿ ಮುಳುಗಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ವಿಜಯಪುರ ನಗರ, ಮುದ್ದೇಬಿಹಾಳ, ನಾಲತವಾಡ, ತಾಳಿಕೋಟೆ, ಬಸವ ಬಾಗೇವಾಡಿ ಪಟ್ಟಣದಲ್ಲೂ ಗುಡುಗು, ಸಿಡಿಲಿನೊಂದಿಗೆ ಉತ್ತಮ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT