ತಾಳಿಕೋಟೆ: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಡೋಣಿ ನದಿ ಸೇತುವೆ ಹಾಗೂ ಮೂಕಿಹಾಳ ಸೇತುವೆ ಮೇಲಿನ ಪ್ರವಾಹ ಇಳಿಮುಖವಾಗಿದ್ದು, ಶನಿವಾರ ಬೆಳಿಗ್ಗೆಯಿಂದ ಮತ್ತೆ ವಾಹನ ಸಂಚಾರ ಪುನರಾರಂಭವಾಯಿತು.

ಡೋಣಿ ನದಿ ಜಲಾನಯನದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಎರಡು ದಿನಗಳಿಂದ ಡೋಣಿ ಸೇತುವೆ ಜಲಾವೃತವಾಗಿತ್ತು. ಮುದ್ದೇಬಿಹಾಳಕ್ಕೆ ಹೋಗುವ ಹಡಗಿನಾಳ ಮಾರ್ಗದಲ್ಲಿ ಮೂಕಿಹಾಳ ಬಳಿಯ ಸೋಗಲಿ ಹಳ್ಳದ ನೆಲಮಟ್ಟದ ಸೇತುವೆಯೂ ಮಳೆಯಿಂದ ಜಲಾವೃತವಾಗಿದೆ. ತಾಳಿಕೋಟೆ ಸಂಪರ್ಕಿಸುವ ಎರಡೂ ಮಾರ್ಗಗಳು ಬಂದಾಗಿ ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನವರೆಗೆ ಮೂಕಿಹಾಳ ಬಳಿ ನೂರಾರು ವಾಹನಗಳು ಸಾಲುಗಟ್ಟಿದ್ದವು.

ಬೆಳಗಿನ ಜಾವ ಡೋಣಿ ನದಿ ಮುಖ್ಯ ಸೇತುವೆ ಬಳಿಯ ಕೆಳ ಸೇತುವೆ ಮೇಲೆ ನೀರಿನ ಹರಿವು ಕಡಿಮೆಯಾಯಿತು. ನಂತರ ತಾಲ್ಲೂಕಾಡಳಿತ ಹಾಗೂ ಪುರಸಭೆಯಿಂದ ಸೇತುವೆ ಮೇಲೆ ಬೀಡು ಬಿಟ್ಟಿದ್ದ ಹೂಳು, ಮುಳ್ಳುಕಂಟಿ ಇತ್ಯಾದಿಗಳನ್ನು ಸ್ವಚ್ಛಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಡೋಣಿ ನದಿ ಪ್ರವಾಹದಿಂದ ಎಡಬಲಗಳ ಜಮೀನುಗಳಲ್ಲಿ ನೀರು ಆವರಿಸಿದ್ದು ನದಿ ಪ್ರವಾಹ ಇಳಿದರೂ ನೀರು ಮಾತ್ರ ಜಮೀನುಗಳಲ್ಲಿ ತುಂಬಿಕೊಂಡಿದ್ದು, ತೊಗರಿಬೆಳೆಗೆ ನೆಟೆರೋಗದ ಸಾಧ್ಯತೆ ಹೆಚ್ಚಾಗಿವೆ. ಹತ್ತಿಬೆಳೆಯೂ ನಾಶವಾಗುವ ಸಾಧ್ಯತೆ ಇದ್ದು ರೈತರ ಆತಂಕವನ್ನು ಸರ್ಕಾರ ದೂರ ಮಾಡಬೇಕು ಎಂದು ರೈತರು ಮನವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.