ದೇವರಹಿಪ್ಪರಗಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಇ-ಕೆವೈಸಿ ಮಾಡಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ ತಿಳಿಸಿದರು.

ತಾಲ್ಲೂಕಿನ ಚಿಕ್ಕರೂಗಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಇ-ಕೆವೈಸಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ತಾಲ್ಲೂಕಿನ ಒಟ್ಟು 14 ಗ್ರಾಮ ಪಂಚಾಯಿತಿಗಳ ಪೈಕಿ 16995 ಸಕ್ರಿಯ ಉದ್ಯೋಗ ಕಾರ್ಡ್ಗಳಿದ್ದು., ಅದರಲ್ಲಿ ಈಗಾಗಲೇ 2808 ಇ-ಕೆವೈಸಿ ಮಾಡಲಾಗಿದೆ. ಹೆಚ್ಚಾಗಿ ಮಣೂರು 2387, ಜಾಲವಾದ 1879, ಹುಣಿಶ್ಯಾಳ 1708 ಉದ್ಯೋಗ ಕಾರ್ಡ್ ಗಳಿದ್ದು ಬಾಕಿ ಉಳಿದ ಎಲ್ಲಾ ಉದ್ಯೋಗ ಕಾರ್ಡ್ಗಳನ್ನು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು. ಹಾಗೂ ಗ್ರಾಮ ಪಂಚಾಯಿತಿ ಪಿಡಿಒ ಅವರು ಇದರ ಬಗ್ಗೆ ಹೆಚ್ಚಿನ ಗಮನವಹಿಸಿ ಈ ತಿಂಗಳು ಪೂರ್ಣಗೊಳಿಸಬೇಕು ಎಂದರು.

ಗ್ರಾಮೀಣ ಉದ್ಯೋಗಖಾತ್ರಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೋಂದಾಯಿತ ಕೂಲಿಕಾರರ ಕಾರ್ಡ್ಗಳನ್ನು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ ಎಂದರು.

ಐಇಸಿ ಸಂಯೋಜಕ ಸಿದ್ದು ಕಾಂಬಳೆ ಗ್ರಾಮದ ಸಂತೆಯಲ್ಲಿ 100ಕ್ಕೂ ಹೆಚ್ಚು ಕೂಲಿಕಾರರ ಇ-ಕೆವೈಸಿ ಮಾಡಿದರು.

ಪಿಡಿಓ ಶಿವಾನಂದ ಮೂಲಿಮನಿ, ಸಂದೀಪ ಚವ್ಹಾಣ, ಬಾಬು ಖೋಜಗಾರ, ಶಿವಶಂಕರ ಹಡಪದ ಸಹಿತ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.