ಇಂಡಿ: ತಾಲ್ಲೂಕಿನ ಇಂಗಳಗಿ ಮತ್ತು ಆಳೂರ ಗ್ರಾಮದ ರೈತರು ಕೃಷಿಗೆ ಹಗಲು ಹೊತ್ತಿನಲ್ಲಿ ಏಳು ಗಂಟೆ ಮತ್ತು ರಾತ್ರಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗಲು ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಗುರುವಾರ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎ.ಎ.ಪವಾರ, ಎ.ಐ.ಜಾಧವ ಮಾತನಾಡಿ, ಹಗಲು ಮತ್ತು ರಾತ್ರಿ ಸೇರಿ 7 ಗಂಟೆ ವಿದ್ಯುತ್ ಕೊಡುವುದರಿಂದ ರೈತರಿಗೆ ತೊಂದರೆಯಾಗುತ್ತದೆ. ಅದಲ್ಲದೆ ತಾಲ್ಲೂಕಿನ ಅನೇಕ ಕಡೆ ಹಗಲು ಏಳು ಗಂಟೆ ವಿದ್ಯುತ್ ನೀಡುತ್ತಾರೆ ಮತ್ತು ಪರೀಕ್ಷೆಗಳು ನಡೆದಿದ್ದು, ವಿದ್ಯಾರ್ಥಿಗಳಿಗೆ ಓದಿಗೆ ಅನುಕೂಲವಾಗೆಂದು ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.

ಹೆಸ್ಕಾ ಎಇಇ ಎಸ್.ಆರ್. ಮೆಂಡೆಗಾರ ಮಾತನಾಡಿ, ಮುಂದಿನ ದಿನಗಳಲ್ಲಿ ಹಗಲು ಹೊತ್ತು ವಿದ್ಯುತ್ 7 ಗಂಟೆ ನೀಡಲಾಗುತ್ತಿದೆ. ಅದಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈಗಾಗಲೇ ಟೂ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಇದೇ ವೇಳೆ ರೈತರು ಮೋಟಾರು ಚಾಲು ಮಾಡಿದರೆ ವಿದ್ಯುತ್ ಕಡಿತ ಆಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ದೃಷ್ಟಿಯಿಂದ ರೈತರು ರಾತ್ರಿ ನೀರಾವರಿ ಪಂಪ್ಸೆಟ್ ಬಳಸದಿರಲು ವಿನಂತಿಸಿದರು.

ಪ್ರತಿಭಟನೆಯಲ್ಲಿ ಎಸ್.ಟಿ.ಪವಾರ, ಬಿ.ಟಿ.ಪವಾರ, ಎಸ್.ಪಿ.ಕುಂಬಾರ, ಎಸ್.ಎಸ್.ಸೀತಿಮನಿ, ಎಸ್.ಬಿ.ಜಾಧವ, ಎಂ.ಎಂ.ಬಳಬಟ್ಟಿ, ಪಿ.ಜೆ.ಚಾಬುಕಸವಾರ, ಎಸ್.ವಿ.ಬನಸೋಡೆ,ಬಿ.ಎಂ.ಪಾಟೀಲ, ಎಸ್.ಆರ್.ನಾಟಿಕಾರ, ಜೆ.ಎಂ.ಸುತಾರ, ವೈ.ಎಂ.ಸಲದತ್ತಿ, ಎ.ಪಿ.ಮಾವಿನಹಳ್ಳಿ, ಆರ್.ಕೆ.ಜಾಧವ ಇದ್ದರು.
ಎಇಇ ಮೆಂಡೆಗಾರ ಇವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.