ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟ ಬೆಂಬಲಿಸಿ ಪ್ರತಿಜ್ಞಾ ದಿನ

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಪ್ರತಿಭಟನೆ
Last Updated 1 ಜನವರಿ 2021, 11:42 IST
ಅಕ್ಷರ ಗಾತ್ರ

ವಿಜಯಪುರ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿನಗರದ ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಅಖಿಲ ಭಾರತ ಪ್ರತಿಜ್ಞಾ ದಿನ ಆಚರಿಸಲಾಯಿತು.

ಕೋಟ್ಯಂತರ ಸಂಖ್ಯೆಯ ರೈತರು ಐತಿಹಾಸಿಕ ಹೋರಾಟ ಮಾಡುತ್ತದ್ದಾರೆ ಈ ಹೋರಾಟವನ್ನು ಹತ್ತಕ್ಕಲು ಸರಕಾರ ಎಲ್ಲ ಕುತಂತ್ರ ಮಾಡಿದರು ಹೋರಾಟ ಬೆಂಕಿ ಉಂಡೆಯಾಗಿ ಬೆಳೆಯುತ್ತಿದೆ. ರೈತರು ಕಾರ್ಮಿಕರು ಮಹಿಳೆಯರು ವಿದ್ಯಾರ್ಥಿಗಳು ಈ ಹೋರಾಟದಲ್ಲಿ ಪಾಲ್ಗೊಂಡು ದಿರೊದ್ದಾತವಾಗಿ ಮನ್ನಡೆಯುತ್ತಿದ್ದಾರೆ.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕರಾಳ ಕೃಷಿ ಕಾನೂನು ವಿರೋಧಿಸಿ ದೆಹಲಿಯಲ್ಲಿ 34 ದಿನಗಳಿಂದ ನಡೆಯುತ್ತಿರುವ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರದ ಹಠಮಾಡಿ ಧೋರಣೆಯಿಂದ ಇದುವರೆಗೆ ನಡೆದ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರ ಗೊಳಿಸುವ ಉದ್ದೇಶದಿಂದ ಪ್ರತಿಜ್ಞಾ ಕೈಗೊಳ್ಳಲಾಗುತ್ತಿದೆ ಎಂದು ಹೋರಾಟಗಾರರು ತಿಳಿಸಿದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ದೇಶದ ಪ್ರಧಾನಿ ಜನರ ಪ್ರಧಾನಿ ಅಲ್ಲ ಈ ದೇಶದ ಶ್ರೀಮಂತರ ಪ್ರಧಾನಿಯಾಗಿದ್ದಾರೆ. ರೈತರ ಹೋರಾಟದ ಬಗ್ಗೆ ಮಾತನಾಡದ ಪ್ರಧಾನಿ, ಅಂಬಾನಿಯ ಮಕ್ಕಳು, ಮೊಮ್ಮೊಕ್ಕಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ. ಇದರಿಂದ ದೇಶದ ರೈತರ ತಾಳ್ಮೆಯ ಕಟ್ಟೆ ಒಡೆದಿದೆ. ಇನ್ನು ಮುಂದೆಯಾದರೂ ಸರ್ಕಾರ ಎಚ್ಚತ್ತುಗೊಂಡು ರೈತರ ಬೇಡಿಕೆ ಇಡೇರಿಸದ್ದಿದ್ದರೇ ಮುಂದಿನ ದಿನಗಳಲ್ಲಿ ಇನ್ನೂ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಆರ್‌ಕೆಎಸ್ ರಾಜ್ಯ ಉಪಾಧ್ಯಕ್ಷ ಬಿ. ಭಗವಾನರೆಡ್ಡಿ ಮಾತನಾಡಿ, ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ 2020 ಹಾಗೂ ಇನ್ನೀತರ ಜನ ವಿರೂಧಿ ಕಾಯ್ದೆಗಳು ಜಾರಿಗೊಳಿಸಲು ಹೊರಟಿರುವುದು ಖಂಡನೀಯ ಎಂದರು.

ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಅಗತ್ಯವಿರುವ ಹಲವು ಕಾನೂನು ತಿದ್ದುಪಡಿಗಳು ಮಾಡುವ ಮೂಲಕ ಸರ್ಕಾರ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುತ್ತಿವೆ ಎಂದು ಆರೋಪಿಸಿದರು.

ಯಾವುದೇ ನಿಯಂತ್ರಣವಿಲ್ಲದೆ ಕಾರ್ಪೊರೇಟ್ ಕಂಪನಿಗಳು ಇನ್ನು ಮುಂದೆ ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ, ಯಾವ ದರಕ್ಕೆ ಬೇಕಾದರೂ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಮಾಡಿಕೊಡಲು ಸಜ್ಜಾಗಿವೆ ಎಂದರು.

ಮುಖಂಡರಾದ ಬಾಳೂ ಜೇವೂರ, ಸುರೇಖಾ ರಜಪೂತ, ಶ್ರೀನಾಥ ಪೂಜಾರಿ, ಸದಾನಂದ ಮೋದಿ, ದಾನೇಶ ಅವಟಿ, ಅಕ್ರಮ ಮಾಶ್ಯಾಳಕರ, ದಸ್ತಗಿರ ಉಕ್ಕಲಿ, ಸಿದ್ದಲಿಂಗ ಬಾಗೆವಾಡಿ, ಭರತಕುಮಾರ ಎಚ್ ಟಿ, ಮಲ್ಲಿಕಾರ್ಜುನ ಎಚ್. ಟಿ, ಸುನಿಲ ಸಿದ್ರಾಮಶೆಟ್ಟಿ ಆಕಾಶ ರಾಮತಿರ್ಥ, ಮಹಾದೇವ ಲಿಗಾಡೆ, ಕಾವೇರಿ, ಸುನಂದಾ ಭಾಗವಹಿಸಿದ್ದರು.

***

ರೈತರು, ಕೃಷಿಕೂಲಿಕಾರರು, ಸ್ಥಳೀಯ ವ್ಯಾಪಾರಸ್ಥರನ್ನು,ಗ್ರಾಮೀಣ ಕಸುಬುದಾರರನ್ನು ಕಾರ್ಪೊರೇಟ್ ಕಂಪನಿಗಳಿಗೆ ಗುಲಾಮರನ್ನಾಗಿ ಮಾಡಲುಕೇಂದ್ರ ಹೊರಟಿದೆ

–ಬಿ. ಭಗವಾನರೆಡ್ಡಿ,ರಾಜ್ಯ ಉಪಾಧ್ಯಕ್ಷ, ಆರ್‌ಕೆಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT