ಬಸವನಬಾಗೇವಾಡಿ: ಬದುಕಿನಲ್ಲಿ ದೊಡ್ಡ ಆಸ್ತಿ ವಿದ್ಯೆ; ವಿದ್ಯೆಗೆ ತಲೆಬಾಗಬೇಕು. ಹಣ, ವಸ್ತ್ರ, ಒಡವೆ ಶಾಶ್ವತವಲ್ಲ, ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವಲ್ಲಿ ಸಾಹಿತ್ಯ ಬಳಗದ ಕಾರ್ಯ ಶ್ಲಾಘನೀಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ.ಎಸ್.ಪಾಟೀಲ ಹೇಳಿದರು.

ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಿಇಒ ಬಸವರಾಜ ತಳವಾರ ಮಾತನಾಡಿ, ಮಕ್ಕಳ ಭವಿಷ್ಯಕ್ಕೆ ಬೇಕಾದ ಸೃಜನಶೀಲತೆಗೆ ನಾವು ಪ್ರಾಶಸ್ತ್ಯ ಕೊಡಬೇಕು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವತ್ತ ಗಮನ ಹರಿಸಬೇಕು ಎಂದು ಹೇಳಿದರು. ತಾಲ್ಲೂಕು ಆರೋಗ್ಯಾಧಿಕಾರಿ ಎಸ್.ಎಸ್.ಓತಗೇರಿ ಮಾತನಾಡಿ, ಕೊರೊನಾ ಸೋಂಕು ಹರಡದಂತೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಉತ್ತಮ ಆರೋಗ್ಯಯುತ ಬದುಕು ಸಾಗಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು. ಬಳಗದ ಜಿಲ್ಲಾ ಘಟಕದ ಅಧ್ಯಕ್ಷೆ ಗಿರಿಜಾ ಪಾಟೀಲ, ಲತಾ ಬಿರಾದಾರ, ಬಾಲ ಪ್ರತಿಭೆ ಸಮರ್ಥ ಪಿ ಬೆಣ್ಣೂರ ಮಾತನಾಡಿದರು.

ಶಂಕರಗೌಡ ಬಿರಾದಾರ, ರಾಜುಗೌಡ ಚಿಕ್ಕೊಂಡ, ಬಿ.ಎಸ್.ಸಾರವಾಡ, ಶರಣಪ್ಪ ಮಾದರ, ಹೊನ್ನಪ್ಪ ಗೊಳಸಂಗಿ, ಎ.ಎಂ.ಹಳ್ಳೂರ, ವೀಣಾ ಗುಳೇದಗುಡ್ಡ, ಕೊಟ್ರೇಶ ಹೆಗಡ್ಯಾಳ, ವೀರೇಶ ಗುಡ್ಲಮನಿ, ರಾಜು ಗಂಗಲ್, ಅರುಂಧತಿ ಹತ್ತಿಕಾಳ ಇದ್ದರು. ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್ಗಳನ್ನು ಸನ್ಮಾನಿಸಲಾಯಿತು.

ಆನ್ಲೈನ್ ಮೂಲಕ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.