ಕೊಲ್ಹಾರ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಇಲ್ಲಿನ ಪೊಲೀಸ್ ಠಾಣಾ ಅವರಣದಲ್ಲಿ ಶಾಂತಿ ಸಭೆ ನಡೆಯಿತು.

ಪಿಎಸ್ಐ ರೇಣುಕಾ ಹಳ್ಳಿ ಮಾತನಾಡಿ, ‘ಗಣೇಶ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಗಿ ಕಡ್ಡಾಯ, ಮೂರ್ತಿ ಪ್ರತಿಷ್ಠಾಪನೆ ಬಳಿಕ ಪ್ರತಿದಿನ ಮೂರ್ತಿಯನ್ನು ಕಾಯಲು ಜನರನ್ನು ಕಡ್ಡಾಯವಾಗಿ ನೇಮಿಸಬೇಕು. ವಿಸರ್ಜನೆ ವೇಳೆ ಡಿಜೆ ನಿಷೇಧಿಸಲಾಗಿದೆ’ ಎಂದು ಸೂಚಿಸಿದರು.

‘ಈದ್ ಮಿಲಾದ್ ಮೆರವಣಿಗೆಯೂ ಶಾಂತಿಯುತವಾಗಿರಬೇಕು, ಬೇರೆ ಕೋಮಿನವರಿಗೆ ತೊಂದರೆಯಾಗದಂತೆ, ಸಹೋದರತ್ವ ಕಾಪಾಡಬೇಕು’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ ಮಾತನಾಡಿ, ‘ಪಿಒಪಿ ಗಣೇಶ ಮೂರ್ತಿಗಳನ್ನು ಯಾರೂ ಮಾರಾಟ ಮಾಡಬಾರದು. ಪಟ್ಟಣ ಪಂಚಾಯಿತಿಯಿಂದ ಮನೆಗಳ ಗಣಪತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್ಗಳು ಮತ್ತು ಸಾರ್ವಜನಿಕ ಗಣೇಶ ವಿಸರ್ಜನೆಗೆ ಅಗತ್ಯಬಿದ್ದರೆ ಒಂದು ದೊಡ್ಡ ಕೃತಕ ನೀರಿನ ಟ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ತಹಶೀಲ್ದಾರ್ ಸಂತೋಷ್ ಮ್ಯಾಗೇರಿ ಮಾತನಾಡಿ, ‘ಎಲ್ಲರೂ ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಹಬ್ಬ, ಹರಿದಿನಗಳನ್ನು ಆಚರಣೆ ಮಾಡೋಣ’ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿ.ಎಸ್ ಗಿಡ್ಡಪ್ಪಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫಿಕ್ ಪಕಾಲಿ, ಹನೀಫ್ ಮಕಾಂದಾರ, ಗಣೇಶ ಯುವಕ ಮಂಡಳಿಗಳ ಸದಸ್ಯರು ಪಟ್ಟಣದ ಹಿರಿಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.