ಸೋಮವಾರ, ಆಗಸ್ಟ್ 15, 2022
23 °C
3 ಭಾರಿ ಅಧ್ಯಕ್ಷ, 2 ಭಾರಿ ಅವಿರೋಧ ಆಯ್ಕೆಯಾದ ಬಸವರಾಜ ತಾವರಗೇರಿ

ವಿಜಯಪುರ: 26 ವರ್ಷಗಳಿಂದ ಗ್ರಾ.ಪಂ ಸದಸ್ಯ

ರಮೇಶ ಎಸ್.ಕತ್ತಿ Updated:

ಅಕ್ಷರ ಗಾತ್ರ : | |

Prajavani

ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಣಿ ಗ್ರಾಮದ ವಾರ್ಡ್‌ ನಂ 1 ಅನ್ನು ಸತತ 26 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಬಸವರಾಜ ತಾವರಗೇರಿ, ಈ ಭಾರಿ ಅವಿರೋಧ ಆಯ್ಕೆಯಾಗಿದ್ದಾರೆ. 6 ಸಲ ಚುನಾಯಿತರಾದ ಹೆಗ್ಗಳಿಕೆ ಅವರದ್ದಾಗಿದೆ.

1994ರಲ್ಲಿ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ನಂತರ ಸತತವಾಗಿ ಅವರು ಸ್ಪರ್ಧಿಸುತ್ತಿದ್ದಾರೆ. ಎಲ್ಲ ಚುನಾವಣೆಗಳಲ್ಲಿ ಜಯಗಳಿಸಿದ್ದಾರೆ. 6ನೇ ಅವಧಿಗೆ ಅವಿರೋಧ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ದಾಖಲೆ ಮಾಡಿದ್ದಾರೆ.

ತಮ್ಮ 27ನೇ ವಯಸ್ಸಿಗೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ ಬಸವರಾಜ ತಾವರಗೇರಿ ಸದಾ ಜನಮುಖಿ
ಕಾರ್ಯಗಳಲ್ಲಿ ತೊಡಗಿದ್ದಲ್ಲದೇ ಗ್ರಾಮದ ಯಾವುದೇ ಕಾರ್ಯವಿರಲಿ ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸಿದ್ದಾರೆ. ಕ್ಷೇತ್ರದ ಜನರಿಗೆ ಸಂಬಂಧಿಸಿದ ಶುಭ ಕಾರ್ಯಗಳು, ಕಷ್ಟದ ಸಂದರ್ಭಗಳಲ್ಲಿಯೂ ಬೆಂಬಲವಾಗಿ ನಿಲ್ಲುತ್ತಾರೆ. ಜನರೊಂದಿಗೆ ಬೆರೆಯುವ ವ್ಯಕ್ತಿ. ಸಮಸ್ಯೆಗಳು ಬಂದಾಗ ಮುಂದೆ ನಿಂತು ಪರಿಹರಿಸಲು ಪ್ರಯತ್ನಿಸುತ್ತಾರೆ ಎಂದು ಎಂದು ಸ್ಥಳೀಯರು ಹೇಳುತ್ತಾರೆ.

ಮೂರು ಭಾರಿ ಅಧ್ಯಕ್ಷ: ತಾವರಗೇರಿ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಮೊದಲ ಅವಧಿಯಲ್ಲಿಯೇ ಪ್ರಥಮ ಅಧ್ಯಕ್ಷರಾಗಿ 1994ರಿಂದ 2000 ವರೆಗೆ ಕಾರ್ಯನಿರ್ವಹಿಸಿದ್ದಾರೆ. 2002ರಿಂದ 2005 ರವರೆಗೆ ಮತ್ತೊಂದು ಅವಧಿಗೆ 30 ತಿಂಗಳು ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2008ರಿಂದ 2010ರವರೆಗೆ ಹೀಗೆ ಮೂರು ಅವಧಿಯಲ್ಲಿ 11 ವರ್ಷಗಳ ಕಾಲ ಕಡಣಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಎರಡು ಸಲ ಅವಿರೋಧ ಆಯ್ಕೆ: 2000-05 ಹಾಗೂ ಈ ಬಾರಿಯ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು