ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವಿರ್ ಅಕ್ರಮ ಮಾರಾಟ: ಸರ್ಕಾರಿ, ಖಾಸಗಿ ಆಸ್ಪತ್ರೆ ಸಿಬ್ಬಂದಿ ಬಂಧನ

Last Updated 7 ಮೇ 2021, 15:22 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಸೋಂಕಿತರಿಗೆ ನೀಡುವ ರೆಮ್‌ ಡಿಸಿವಿರ್ ಇಂಜೆಕ್ಷನ್‌ ಅನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಅಧಿಕ ದರಕ್ಕೆ ಮಾರಾಟ ಮಾಡುತ್ತಿದ್ದ ನಗರದ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಏಳು ಜನ ಸಿಬ್ಬಂದಿಯನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾಸ್ಪತ್ರೆಯ ಹೊರಗುತ್ತಿಗೆ ಡಿ ಗ್ರೂಪ್‌ ನೌಕರರಾದ ರಾಜೇಸಾಬ್ ಹತ್ತರಕಿಹಾಳ, ಇಮ್ತಿಯಾಜ್ ಮಟ್ಟಿ, ಮೌಲಾಲಿ ಹತ್ತರಕಿಹಾಳ,ಹೊರ ಗುತ್ತಿಗೆ ಸ್ಟಾಫ್‌ ನರ್ಸ್‌ ಶಿವಕುಮಾರ್ ಮದರಿ,ಜಕ್ಕಪ್ಪ ತಡ್ಲಗಿ, ವಿಜಯಪುರದ ಮುನೀರ್‌ ಬಾಂಗಿ ಆಸ್ಪತ್ರೆಯ ಓ.ಟಿ ಸಹಾಯಕ ಸೈಯದ್ ಆಹೇರಿ, ವಿಜಯಪುರ ಬಂಜಾರ ಆಸ್ಪತ್ರೆ ಫಾರ್ಮಾಸಿಸ್ಟ್‌ ಸಂಜೀವ ಜೋಶಿ ಅವರನ್ನು ಬಂಧಿಸಲಾಗಿದೆ ಎಂದರು.

ಪ್ರಕರಣದ ಇನ್ನಬ್ಬರು ಆರೋಪಿಗಳಾದ ವಿಜಯಪುರ ಜಿಲ್ಲಾಸ್ಪತ್ರೆ ಸ್ಟಾಫ್‌ ನರ್ಸ್‌ ಯಲ್ಲಮ್ಮ ಕನ್ನಾಳ ಮತ್ತು ಸುರೇಖಾ ಗಾಯಕವಾಡ ಎಂಬುವವರು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.

ಬಂಧಿತರಿಂದ ರೆಮ್‌ ಡಿಸಿವಿರ್ ಇಂಜೆಕ್ಷನ್‌ ಇರುವ 3 ಬಾಟಲ್, 24 ರೆಮ್‌ ಡಿಸಿವರ್ ಖಾಲಿ ಬಾಟಲ್‌ಗಳು, ₹ 64 ಸಾವಿರ ನಗದು, 7 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗಾಂಧಿಚೌಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT