ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ: ಅರ್ಕಾ ನಿಂಬೆ ವಿಶೇಷ

Published 12 ಜುಲೈ 2023, 14:09 IST
Last Updated 12 ಜುಲೈ 2023, 14:09 IST
ಅಕ್ಷರ ಗಾತ್ರ

ಇಂಡಿ : ನಿಂಬೆ ಜಾತಿಯ ಹಣ್ಣುಗಳನ್ನು ಚೆನ್ನಾಗಿ ನೀರು ಬಸಿದುಹೋಗುವ ಆಳವಾದ ಮಣ್ಣಿನಲ್ಲಿ ಬೆಳೆಯಬಹುದಾಗಿದ್ದು, ಅಧಿಕ ಮತ್ತು ಉತ್ತಮ ಗುಣಮಟ್ಟ ಇಳುವರಿಗಾಗಿ ಪ್ರಮುಖ ಲಘು ಪೋಷಕಾಂಶಗಳಾದ ಬೋರಾನ್, ಮ್ಯಾಂಗನೀಸ್, ಸತು, ಕಬ್ಬಿಣ ಮತ್ತು ತಾಮ್ರಗಳ ಬಳಕೆ ಬಹು ಉಪಯುಕ್ತ ಎಂದು ಇಂಡಿ ಪಟ್ಟಣದಲ್ಲಿರುವ ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.

ಮಣ್ಣಿನಲ್ಲಿ ಸಾವಾಯವ ಅಂಶದ ಕೊರತೆ, ರಸಗೊಬ್ಬರಗಳ ಹೆಚ್ಚಿನ ಬಳಕೆ ಮತ್ತು ಹೈಬ್ರೀಡ್ ತಳಿಗಳನ್ನು ಬೆಳೆಯುವುದರಿಂದ ಮಣ್ಣಿಗೆ ಲಘು ಪೋಷಕಾಂಶಗಳ ಅವಶ್ಯಕತೆ ಹೆಚ್ಚಾಗುತ್ತಿದೆ. ಈ ಲಘು ಪೋಷಕಾಂಶಗಳನ್ನು ನಿಂಬೆ ಬೆಳೆಗೆ ಒದಗಿಸಲು ಲಘು ಪೋಷಕಾಂಶಗಳ ಮಿಶ್ರಣವನ್ನು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ್ದಾರೆ ಎಂದು ಸ್ಥಳೀಯ ವಿಜ್ಞಾನಿಗಳು ತಿಳಿಸಿದ್ದಾರೆ.

ಸರಳ ಹಾಗೂ ಲಾಭದಾಯಕ:
ಪ್ರತಿ 15 ಲೀಟರ್ ನೀರಿಗೆ 75 ಗ್ರಾಂ ಅರ್ಕಾ ಲಿಂಬೆ ಸ್ಪೆಷಲ್‌ ಮತ್ತು ಎರಡು ಲಿಂಬೆ ಹಣ್ಣಿನರಸ ಹಾಗೂ ಒಂದು ರೂಪಾಯಿ ಮೌಲ್ಯದ ಒಂದು ಶ್ಯಾಂಪೂವನ್ನು ಚೆನ್ನಾಗಿ ಮಿಶ್ರಣ ಮಾಡಿ ತಯಾರಿಸಿದ ದ್ರಾವಣವನ್ನು ಎಲೆಗಳಿಗೆ ಸಿಂಪರಣೆ ಮಾಡಬೇಕು.
ಹೂ ಬಿಡುವ ಒಂದು ತಿಂಗಳ ಮುಂಚಿತವಾಗಿ, ಹಣ್ಣು ಕೊಯ್ಲು ಮಾಡುವವರೆಗೂ ಪ್ರತಿ ತಿಂಗಳು ಸಿಂಪರಣೆ ಮಾಡಬೇಕು.

ಒಂದು ಎಕರೆಗೆ 6 ರಿಂದ 8 ಕೆ.ಜಿ. ಲಿಂಬೆ ಸ್ಪೆಷಲ್‌ ಬೇಕಾಗುತ್ತದೆ. ಈ ಸಿಂಪರಣೆಯನ್ನು ಬೆಳಿಗ್ಗೆ ಸೂರ್ಯ ಪ್ರಖರವಾಗುವ ಮೊದಲು ಎಲೆಗಳ ಕೆಳ ಮತ್ತು ಮೇಲ್ಭಾಗ ಹಾಗೂ ಹಣ್ಣುಗಳಿಗೆ ಸಿಂಪಡಿಸಿದಲ್ಲಿ ಹೆಚ್ಚು ಲಾಭದಾಯಕ.

ಸಿಂಪರಣೆಯ ಲಾಭಗಳು : ಅರ್ಕಾ ನಿಂಬೆ ಸ್ಪೆಷಲ್‌ ಎಲೆಗಳಿಗೆ ಸಿಂಪರಣೆ ಮೂಲಕ ದೊರಕಿಸಿ ಕೊಡುವುದರಿಂದ ಪೋಷಕಾಂಶಗಳ ಕೊರತೆಗಳಿಂದ ಉಂಟಾಗುವ ನ್ಯೂನ್ಯತೆಗಳನ್ನು ಸರಿಪಡಿಸಬಹುದು.
ಕಡಿಮೆ ರಸಗೊಬ್ಬರಗಳ ಬಳಕೆ. ಅಧಿಕ ಹಣ್ಣುಗಳ ಸಂಖ್ಯೆ, ಉತ್ತಮ ಗಾತ್ರ, ಆಕರ್ಷಕ ಬಣ್ಣ, ರುಚಿ ಮತ್ತು ಉತ್ತಮ ಗುಣಮಟ್ಟದ ಫಸಲಿನೊಂದಿಗೆ ಶೇ15 ರಿಂದ 20ರಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

ಅರ್ಕಾನಿಂಬೆ ಸ್ಪೆಷಲ್ ಕೃಷಿ ವಿಜ್ಞಾನ ಕೇಂದ್ರ, ಇಂಡಿಯಲ್ಲಿ ಲಭ್ಯವಿದ್ದು, ಆಸಕ್ತರು ಸದುಪಯೋಗ ಪಡೆದು ಕೊಳ್ಳಬಹುದು. ಮಾಹಿತಿಗಾಗಿ ಡಾ. ಸವಿತಾ ಬಿ. ವಿಜ್ಞಾನಿ (ಮಣ್ಣು ವಿಜ್ಞಾನ) ದೂರವಾಣಿ ಸಂಖ್ಯೆ: 7005442056 ಅಥವಾ ಡಾ. ವೀಣಾ ಚಂದಾವರಿ ದೂರವಾಣಿ ಸಂಖ್ಯೆ 9591209400 ಇವರನ್ನು ಸಂರ್ಪಕಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT