ಹೊರ್ತಿ: ಇಂಡಿ ತಾಲ್ಲೂಕಿನ ಸಮಗ್ರ ನೀರಾವರಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಸಮೀಪದ ಗುಂದವಾನ ಮತ್ತು ಬಳ್ಕೊಳ್ಳಿ ಕೆರೆ(ನಂದಿ ಸರೋವರ)ಗೆ ಶನಿವಾರ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು.

ಭಾರತ ಕೃಷಿ ಪ್ರಧಾನ ದೇಶ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಪರವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ರೈತರು ಬೆಳೆದ ಬೆಳೆಗಳಿಗೆ ಇಲ್ಲಿವರೆಗೂ ಸೂಕ್ತ ಬೆಂಬಲ ಬೆಲೆಯನ್ನು ಯಾವ ಸರ್ಕಾರವೂ ನೀಡಿಲ್ಲ. ಹಗಲು ರಾತ್ರಿ ಎನ್ನದೇ ಕೃಷಿ ಚಟುವಟಿಗಳಲ್ಲಿ ತೊಡಗಿ ಕಷ್ಟದಿಂದ ದುಡಿದು ಬೆಳೆದ ಬೆಳೆಗಳಿಗೆ ಬೆಬಲ ಬೆಲೆ ನೀಡಬೇಕಾದ ಅಗತ್ಯತೆಯಿದೆ ಎಂದರು.

ಬಾಗಿನ ಅರ್ಪಣೆ ಕಾರ್ಯಕ್ರಮದ ಮುನ್ನ ಗುಂದವಾನ ಮತ್ತು ಬಳ್ಳೊಳ್ಳಿ ಗ್ರಾಮದ ರೈತರು ಸೇರಿ ಶಾಸಕ ಯಶವಂತರಾಯಗೌಡ ಪಾಟೀಲ ಸ್ವಾಗತಿಸಿ, ನಂತರ ಅವರನ್ನು ಎತ್ತಿನ ಬಂಡಿಯ ಮೇಲೆ ಕೂರಿಸಿ ಮೆರವಣಿಗೆಯ ಮೂಲಕ ಅದ್ದೂರಿಯ ಸ್ವಾಗತ ಕೋರಿದರು.

ತೊರವಿಯ ಚಿದಾನಂದ ಸ್ವಾಮೀಜಿ ಮತ್ತು ತದ್ದೇವಾಡಿ, ಮಹಾತೇಂಶ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ರೈತ ಮುಖಂಡ ಗಿರಮಲ್ಲ ಮಾಲಗಾರ, ಗ್ರಾ.ಪಂ ಅಧ್ಯಕ್ಷೆ ಶಾಂತಾಬಾಯಿ ಮೇಲಿನಮನಿ, ಕಾಂಗ್ರೆಸ್ ಮುಖಂಡ ಎಂ.ಆರ್. ಪಾಟೀಲ (ಬಳ್ಳೊಳ್ಳಿ), ಎಸ್. ಟಿ. ಸಮಾಜದ ರಾಜ್ಯ ಉಪಾಧ್ಯಕ್ಷ ಸಣ್ಣಪ್ಪ ತಳವಾರ, ಮುಖಂಡ ಭೀಮಣ್ಣ ಕೌವಲಗಿ,ತಾ.ಪಂ ಇಓ ಡಾ.ಬಿ ಎಚ್.ಕನ್ನೂರ, ತಹಶೀಲ್ದಾರ್ ವಿ.ಎಸ್. ಕಡಬಾವಿ, ಶಿವಗೊಂಡಂಪ್ಪ ಚನ್ನಗೊಂಡ, ಶ್ರೀಶೈಲ ವಾಲಿ, ಹಣಮಂತ ಖಡೆಖಡೆ, ಪ್ರಕಾಶ ಪ್ಯಾಟಿ, ಸಿದ್ದರಾಮ ಖಾನಾಪುರ, ಸಣ್ಣ ನೀರಾವರಿ ಇಲಾಖೆಯ ಸಂದೀಪ, ರಿಯಾಜ್ ಬಾಗಲಕೋಟ, ಆನಂದಗೌಡ ದೇಸಾಯಿ ಹಾಗೂ ಗುಂದವಾನ, ಬಳ್ಳೊಳ್ಳಿ, ಝಳಕಿ, ಮೈಲಾರ, ಅಂಜುಟಗಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.