ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏತ ನೀರಾವರಿ: ಮೋಟಾರ್‌ ಅಳವಡಿಕೆಗೆ ಆಗ್ರಹ

Last Updated 23 ಜನವರಿ 2022, 16:22 IST
ಅಕ್ಷರ ಗಾತ್ರ

ವಿಜಯಪುರ: ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ವ್ಯಾಪ್ತಿಯಲ್ಲಿ ಹಿಂಗಾರಿ ಬೆಳೆಗಳಾದ ಶೇಂಗಾ, ಕಬ್ಬು, ಕಡಲೆ, ದ್ರಾಕ್ಷಿ, ಲಿಂಬೆ, ಗೋದಿ, ಮೆಕ್ಕೆ ಜೋಳ ಮುಂತಾದ ಬೆಳೆಗಳಿಗೆ ನೀರಿಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದು, ತಕ್ಷಣವೇ ಆರು ಮೋಟರ್‌ ಅಳವಡಿಸಿ, ರೈತರಿಗೆ ಅನುಕೂಲು ಮಾಡಿಕೊಡಬೇಕು ಎಂದು ಕಾಂಗ್ರೆಸ್‌ ಮುಖಂಡ ಅಶೋಕ ಮನಗೂಳಿ ಆಗ್ರಹಿಸಿದ್ದಾರೆ.

ಸದ್ಯ ನೀರು ಹರಿಸಲು ಎರಡು ಮೋಟಾರ್‌ ಮಾತ್ರ ಚಾಲ್ತಿಯಲ್ಲಿರುತ್ತವೆ. ಪ್ರತಿ ವರ್ಷವೂ ನಿರ್ವಹಣೆ ಸಲುವಾಗಿ ₹ 25 ಲಕ್ಷ ಮಂಜೂರಾದರು ಕಾರ್ಯರೂಪಕ್ಕೆ ಬರುತ್ತಿಲ್ಲ. ಕಳೆದ ಆರು ತಿಂಗಳಿನಿಂದ ಅಧಿಕಾರಿಗಳು ಟೆಂಡರ್‌ ಆಗಿದೆ ಎಂದು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನೂತನ ಮಿನಿವಿಧಾನಸೌಧ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಸ್ಥಳೀಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಆಹ್ವಾನಿಸದೇಹಾಲಿ ಶಾಸಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಸಿಂದಗಿ ಪಟ್ಟಣದ ಸ.ನಂ 763 ರಲ್ಲಿ ಕರ್ನಾಟಕ ಕೊಳಗೇರಿ ಅಭೀವೃದ್ಧಿ ಮಂಡಳಿಯಿಂದ ಆಯ್ಕೆಯಾಗಿರುವ 329 ಫಲಾನುಭವಿಗಳಿಗೆ ವಸತಿ, ಸೂರು ಕಲ್ಪಿಸಲು ಈಗಾಗಲೆ ₹ 19 ಕೋಟಿ ಮೊತ್ತದ ಟೆಂಡರ್‌ ಆಗಿದ್ದು, ಫಲಾನುಭವಿಗಳಿಗೆ ಶೀಘ್ರ ಹಕ್ಕು ಪತ್ರ ವಿತರಣೆ ಮಾಡಬೇಕು ಹಾಗೂ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿಂದಗಿ ಪಟ್ಟಣದಲ್ಲಿ ಮಂಜೂರಾದ ಕಾಯಿಪಲ್ಲೆ ಮಾರುಕಟ್ಟೆಗೆ ಅನುದಾನ ಮಂಜೂರು ಮಾಡಿ, ಮೂಲಭೂತ ಸೌಕರ್ಯವನ್ನು ಒದಗಿಸಿ, ವ್ಯಾಪಾರಸ್ತರಿಗೆ ಅನುಕೂಲು ಮಾಡಿಕೊಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT