ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview| ಬಸವನಬಾಗೇವಾಡಿ ಜೆಡಿಎಸ್‌ ಅಭ್ಯರ್ಥಿ ಸೋಮನಗೌಡ ಪಾಟೀಲ ಮನಗೂಳಿ

ಜನರೊಂದಿಗಿನ ಉತ್ತಮ ಬಾಂಧವ್ಯವೇ ಶ್ರೀರಕ್ಷೆ ಎಂದ ಅಭ್ಯರ್ಥಿ
Published 24 ಏಪ್ರಿಲ್ 2023, 18:30 IST
Last Updated 24 ಏಪ್ರಿಲ್ 2023, 18:30 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಮತಕ್ಷೇತ್ರದಲ್ಲಿ ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೋಮನಗೌಡ (ಅಪ್ಪುಗೌಡ) ಪಾಟೀಲ ಮನಗೂಳಿ ಅವರು ಮತ್ತೊಮ್ಮೆ ಅದೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಾರೆ. ಅವರೊಂದಿಗಿನ ಪ್ರಶ್ನೋತ್ತರ ಇಂತಿದೆ.

ಜನ ಏತಕ್ಕಾಗಿ ನಿಮಗೆ ಮತ ಹಾಕಬೇಕು?

ಕ್ಷೇತ್ರದ ಜನರು ನಮ್ಮ ತಂದೆ ಬಿ.ಎಸ್.ಪಾಟೀಲ ಅವರನ್ನು ಆರು ಬಾರಿ ಶಾಸಕರನ್ನಾಗಿ ಆಯ್ಕೆಮಾಡಿದ್ದರು. ಅವರು ನಿಸ್ವಾರ್ಥ ಸೇವೆಯೊಂದಿಗೆ ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲಿಯೇ ನಮ್ಮ ಮನೆತನ ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಕ್ಷೇತ್ರದ ಅಭಿವೃದ್ಧಿಯಾಗಬೇಕು. ಜನರ ಬೇಡಿಕೆಗಳು ನನಸಾಗಬೇಕಾದರೆ ನನಗೆ ಮತ ಹಾಕಬೇಕು.

ಶಾಸಕರಾಗಿ ಆಯ್ಕೆಯಾದರೆ ಕ್ಷೇತ್ರಕ್ಕೆ ನಿಮ್ಮ ಯೋಜನೆಗಳೆನು?

ಬಸವಜನ್ಮ ಭೂಮಿಯಲ್ಲಿ ಬಸವಣ್ಣನವರ ಭವ್ಯವಾದ ಸ್ಮಾರಕವಾಗುವ ಜೊತೆಗೆ ಭವ್ಯ ಮೂರ್ತಿ ಪ್ರತಿಷ್ಠಾಪನೆಯಾಗಬೇಕು. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಮೂಲಕ ಶೈಕ್ಷಣಿಕ ಪ್ರಗತಿ, ನೀರಾವರಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು. ಕ್ಷೇತ್ರದಲ್ಲಿ ಇನ್ನು ಸಾಕಷ್ಟು ಅಭಿವೃದ್ಧಿ ಮಾಡುವ ಕನಸು ಇದೆ.

ಈ ಚುನಾವಣೆಯಲ್ಲಿ ನಿಮ್ಮ ಪ್ರತಿಸ್ಪರ್ಧಿ ಪಕ್ಷ ಯಾವುದು?

ಪ್ರಸಕ್ತ ಚುನಾವಣೆಯಲ್ಲಿ ನಮ್ಮ ಪ್ರತಿಸ್ಪರ್ಧಿ ಪಕ್ಷ ಬಿಜೆಪಿ

ಚುನಾವಣೆಯಲ್ಲಿ ನಿಮಗೆ ಎದುರಾಗಿರುವ ಸವಾಲು ಏನು?

ಎರಡು ವರ್ಷದ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ದೆ, ಟಿಕೆಟ್ ನನಗೆ ಸಿಗುವ ಭರವಸೆ ಇತ್ತು. ಕೊನೆಯಲ್ಲಿ ಕಾಣದ ಕೈಗಳಿಂದಾಗಿ ಟಿಕೆಟ್ ಕೈ ತಪ್ಪಿದೆ. ನಾನು ಆಯ್ಕೆಯಾದರೆ ನಿರಂತರ ಅಭಿವೃದ್ಧಿಯಾಗುವ ಜೊತೆಗೆ ಕಾಯಂ ಶಾಸಕರಾಗಿ ಉಳಿಯುತ್ತಾರೆ ಎಂಬ ಭಯದಿಂದ ಕೆಲವರು ನನಗೆ ಟಿಕೆಟ್ ತಪ್ಪಿಸಿದ್ದಾರೆ. ಕುಮಾರಸ್ವಾಮಿ ಅವರು ನನ್ನನ್ನು ಆಹ್ವಾನಿಸಿ ಜೆಡಿಎಸ್ ಟಿಕೆಟ್ ನೀಡಿದ್ದಾರೆ.  

ಚುನಾವಣೆ ಪ್ರಚಾರ ಹೇಗೆ ನಡೆದಿದೆ?

ನಾಮಪತ್ರ ಸಲ್ಲಿಕೆ ದಿನವೇ ಕ್ಷೇತ್ರದ ಜನರು ಸ್ವಪ್ರೇರಣೆಯಿಂದ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಪ್ರಚಾರ ಆರಂಭವಾಗಿದೆ. ಮನಗೂಳಿ ಗೌಡರ ಮನೆತನ ಎತ್ತಿ ಹಿಡಿಯಬೇಕೆಂಬುದು ಕ್ಷೇತ್ರದ ಜನರು ನಿಶ್ಚಯಿಸಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳು ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಪಕ್ಷದಲ್ಲಿ ಅಸಮಾಧಾನ, ಭಿನ್ನಮತ ಚುನಾವಣೆಯಲ್ಲಿ ಪರಿಣಾಮ ಬೀರುವುದೇ, ಭಿನ್ನಮತ ನಿವಾರಣೆಗೆ ಏನು ಕ್ರಮ ಕೈಗೊಂಡಿದ್ದಿರಿ?

ಭಿನ್ನಮತ ಅನ್ನುವ ಶಬ್ದವೇ ಇಲ್ಲ. ಬಿಜೆಪಿ ಟಿಕೆಟ್ ಕೈ ತಪ್ಪಿದಾಗ ಕುಮಾರಸ್ವಾಮಿಯವರು ನನ್ನನ್ನು ಆಹ್ವಾನಿಸಿ ಈಗಾಗಲೇ ಘೋಷಣೆಯಾಗಿದ್ದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮ್ಮುಖದಲ್ಲೇ ಚರ್ಚಿಸಿ ನನಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ಯಾವುದೇ ರೀತಿಯ ಭಿನ್ನಮತ ಅಸಮಧಾನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT